ನವದೆಹಲಿ: ನವದೆಹಲಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಗರ ಸ್ವಚ್ಛ ಭಾರತ್ ಮಿಷನ್-2 (ಎಸ್‍ಬಿಎಂ-ಯು), ಅಟಲ್ ಮಿಷನ್ ನಗರೀಕರಣ ಮತ್ತು ಕಾಯಕಲ್ಪ-2 (ಅಮೃತ್) ಯೋಜನೆಗಳಿಗೆ ಚಾಲನೆ ನೀಡಿದರು.
ಸ್ವಚ್ಚ ಭಾರತ ಆಂದೋಲನ- 2ಕ್ಕೆ ಚಾಲನೆ ನೀಡಿದ ಪ್ರಧಾನಿ, ದೇಶದ ಎಲ್ಲಾ ನಗರ ಗಳಲ್ಲಿ ತ್ಯಾಜ್ಯ ಮುಕ್ತ ಮತ್ತು ಸುರಕ್ಷಿತ ನೀರು ಪೂರೈಕೆಯನ್ನು ಖಚಿತ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿ, ಅಮೃತ್ ಮತ್ತು ಸ್ವಚ್ಚ ಭಾರತ್ ಯೋಜನೆ ಗಳು ಹಂತ ಹಂತವಾಗಿ ನಗರೀಕರಣದ ಸವಾಲು ಗಳನ್ನು ನಿರ್ವಹಣೆ ಮಾಡ ಲಿವೆ. ಈ ಯೋಜನೆಗಳು 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗೆ ನೆರವಾಗಲಿವೆ ಎಂದು ಹೇಳಿದರು.
ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ, ಸ್ವಚ್ಚತೆಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮಕ್ಕಳು ಚಾಕೋಲೆಟ್‍ನ ರ‍್ಯಾಪರನ್ನು ಆವರಣ ದಲ್ಲಿ ಎಸೆಯದೆ, ಕಸದ ಬುಟ್ಟಿಯಲ್ಲೇ ಹಾಕಲು ಜಾಗೃತಿ ಮೂಡಿಸಬೇಕು. ಮಕ್ಕಳಲ್ಲಿ ಆರಂಭವಾದ ಜಾಗೃತಿ ಹೆಚ್ಚು ಪರಿಣಾಮಕಾರಿ ಎಂದು ಹೇಳಿದರು.
2014ರಲ್ಲಿ ಮಹಾತ್ಮಗಾಂಜೀ ಅವರ ಜನ್ಮದಿನ ದಂದು ಸ್ವಚ್ಚ ಭಾರತ್‍ಗೆ ಚಾಲನೆ ನೀಡಿ ದಾಗ ತ್ಯಾಜ್ಯ ಸಂಸ್ಕರಣೆ ಶೇ.20ರಷ್ಟು ಮಾತ್ರವಿತ್ತು, ಪ್ರಸ್ತುತ ಶೇ.70ರಷ್ಟು ಪ್ರಗತಿ ಸಾಧಿಸಿ ದ್ದೇವೆ. ಅದನ್ನು ಶೀಘ್ರವೇ ಶೇ.100ರಷ್ಟು ಗುರಿ ಸಾಧಿಸುವ ಉದ್ದೇಶವಿದೆ ಎಂದರು.
ಗ್ರಾಮ ಪಂಚಾಯತ್, ಪಾಣಿ ಸಮಿತಿಗಳು ಹಾಗೂ ಗ್ರಾಮ ನೀರು ಹಾಗೂ ನೈರ್ಮಲೀ ಕರಣ ಸಮಿತಿಗಳ ಸದಸ್ಯರೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ಸ್ವಚ್ಚ ಭಾರತ್ ಮೀಷನ್ ಯೋಜನೆ ದೇಶದ ಎಲ್ಲಾ ನಗರಗಳನ್ನು ತ್ಯಾಜ್ಯ ಮುಕ್ತ ಮಾಡುವ ಗುರಿ ಹೊಂದಿದೆ. ಅಮೃತ್ ಯೋಜನೆ ಯಡಿ ಆಯ್ಕೆಯಾಗಿರುವ ನಗರಗಳಲ್ಲಿ ಮತ್ತು ಎಲ್ಲಾ ನಗರ ಸ್ಥಳೀಯ ಸಂಸ್ಥಗಳಲ್ಲಿ ಬಯಲು ಬಹಿರ್ದೇಸೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ.
ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ನೈರ್ಮಲೀಕರಣ ಗುರಿ ಸಾಧಿಸಲು ಈ ಯೋಜನೆಗಳು ಸಹಕಾರಿ ಯಾಗಲಿವೆ ಎಂದಿದ್ದಾರೆ. ಸ್ವಚ್ಚ ಭಾರತ ಅಭಿಯಾನ 2ರಲ್ಲಿ ಘನ ತ್ಯಾಜ್ಯ ವಿಂಗಡಣೆಗೆ ಆದ್ಯತೆ ನೀಡಲಾಗುತ್ತದೆ.
ಅಮೃತ 2ರ ಯೋಜನೆ ದೇಶದ 4700 ನಗರ ಸ್ಥಳೀಯ ಸಂಸ್ಥೆಗಳಿಗೆ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಖಾತ್ರಿ ಹೊಂದಿದೆ. ಅಮೃತ ಎರಡನೆ ಹಂತದಲ್ಲಿ ದೇಶದ 10.5 ಕೋಟಿ ಜನ ಯೋಜನೆಯ ಲಾಭ ಪಡೆಯಲಿದ್ದಾರೆ. ನೈರ್ಮಲೀಕರಣದ ಜೊತೆಗೆ ಆರ್ಥಿಕ ಅಭಿವೃದ್ಧಿ ಹಾಗೂ ಅಂತರ್ಜಲ ಅಭಿವೃದ್ಧಿಯ ಉದ್ದೇಶಗಳನ್ನು ಯೋಜನೆ ಹೊಂದಿದೆ.