Friday, 13th December 2024

ಸ್ವಾಮಿ ವಿವೇಕಾನಂದರ 157ನೇ ಜಯಂತಿ: ದೇಶಾದ್ಯಂತ ಸ್ಮರಣೆ

ನವದೆಹಲಿ: ಸ್ವಾಮಿ ವಿವೇಕಾನಂದರ 157ನೇ ಜಯಂತಿ ಪ್ರಯುಕ್ತ ದೇಶಾದ್ಯಂತ ಮಂಗಳವಾರ ಸ್ವಾಮಿ ವಿವೇಕಾನಂದರನ್ನು ಗಣ್ಯರು ಸ್ಮರಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನನ್ನ ವಿಧೇಯ ನಮನಗಳು. ಇಡೀ ಮನು ಕುಲಕ್ಕೆ ಅವರೊಬ್ಬ ಸ್ಪೂರ್ತಿ. ವಿಶೇಷವಾಗಿ ಯುವಜನತೆಗೆ ಅವರು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನ ಗೊಳಿಸಿದರು ಮತ್ತು ಅದನ್ನು ಜಾಗತಿಕ ರಂಗದಲ್ಲಿ ಕೇಂದ್ರೀಕರಿಸಿದರು.ಅವರ ಬೋಧನೆಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡು ತ್ತಲೇ ಇವೆ ಎಂದು ಹೇಳಿದ್ದಾರೆ.

ಈ ಬಾರಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಮೋ ಆಪ್ ನಲ್ಲಿ ವಿವೇಕಾನಂದರ ಆಲೋಚನೆಗಳು ಮತ್ತು ವೈಯಕ್ತಿಕ ಸಂದೇಶಗಳನ್ನು ನೀವು ಹಂಚಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಅವರ ಅದ್ವಿತೀಯ ಆಲೋಚನೆಗಳನ್ನು ಇಂದಿನ ಜನಾಂಗದವರಿಗೆ ಪಸರಿಸುವ ಕೆಲಸ ಮಾಡೋಣ ಎಂದು ಆಪ್ ನ ಲಿಂಕ್ ನ್ನು ಶೇರ್ ಮಾಡಿದ್ದಾರೆ.