ನವದೆಹಲಿ: ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರ ಪುಣ್ಯತಿಥಿ ಅಂಗವಾಗಿ ಎಲ್ಲೆಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಸ್ಮರಿಸಲಾಗುತ್ತಿದೆ.
ಸ್ಮಾಮಿ ವಿವೇಕಾನಂದರ ಪುಣ್ಯತಿಥಿಯಂದು ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಕಾಶ್ ಜಾವಡೇಕರ್ ಸೇರಿದಂತೆ ಹಲವು ಗಣ್ಯರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕೇಂದ್ರ ಗೃಹಸಚಿವ ಅಮಿತ್ ಶಾ ತಮ್ಮ ಸಂದೇಶದಲ್ಲಿ, ಸ್ವಾಮಿ ವಿವೇಕಾನಂದರು, ಭಾರತೀಯತೆ, ಅಪಾರ ಜ್ಞಾನ ಮತ್ತು ಸಕಾರಾತ್ಮಕ ಶಕ್ತಿಗೆ ಅನ್ವರ್ಥನಾಮ ವಾಗಿದ್ದಾರೆ. ಮನುಕಲದ ಕಲ್ಯಾಣ ಮತ್ತು ಏಳಿಗೆಗೆ ಅವರು ಜೀವನವನ್ನು ಮುಡುಪಾಗಿಟ್ಟಿದ್ದರು. ಭಾರತದ ಸಂಸ್ಕೃತಿ ಮತ್ತು ತತ್ವಶಾಸ್ತ್ರವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ಮಹನೀಯ ಸ್ವಾಮಿ ವಿವೇಕಾನಂದರಿಗೆ ಗೌರವ ನಮನ ಎಂದು ಹೇಳಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಸ್ವಾಮಿ ವಿವೇಕಾನಂದರು ಶಾಂತಿ ಮತ್ತು ಸಮಾನತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾಪುರುಷರಾಗಿದ್ದಾರೆ. ಯುವಜನತೆಗೆ ಅವರು ಸದಾ ಸ್ಪೂರ್ತಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸ್ವಾಮಿ ವಿವೇಕಾನಂದರು ತಮ್ಮ 39ನೇ ವಯಸ್ಸಿನಲ್ಲಿ 1902ರ ಈ ದಿನ ಪಶ್ವಿಮ ಬಂಗಾಳದ ಬೇಲೂರು ಮಠದಲ್ಲಿ ದೈವಾಧೀನರಾಗಿದ್ದರು. ಮನುಕುಲದ ಉದ್ಧಾರಕ್ಕಾಗಿ ಮತ್ತು ದೇಶ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದ, ಅವರು ಆಧ್ಮಾತ್ಮ ಶಕ್ತಿ ಏನೆಂಬುದನ್ನು ಪ್ರಪಂಚಕ್ಕೆ ತಿಳಿಸಿಕೊಟ್ಟಿದ್ದರು. ಸರಿಯಾದ ಮಾರ್ಗ ಮತ್ತು ಜೀವನದಲ್ಲಿ ಯಶಸ್ವಿಯಾಗಲು ಯುವ ಜನತೆಗೆ ಸ್ವಾಮಿ ವಿವೇಕಾನಂದರು ಸದಾ ಸ್ಫೂರ್ತಿಯಾಗಿದ್ದಾರೆ.