Sunday, 15th December 2024

ನಾಳೆ ಜೆಎನ್‌ಯುನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನ.12ರಂದು ದೆಹಲಿಯ ಜವಾಹರ್‌ಲಾಲ್‌ ನೆಹರು ವಿವಿಯಲ್ಲಿ ನಿರ್ಮಿಸಲಾಗಿ ರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ, ಪ್ರತಿಮೆಯನ್ನು ಉದ್ಘಾಟನೆಗೊಳಿಸಲಿದ್ದಾರೆ ಎಂದು ಜೆಎನ್‌ಯು ಉಪ ಕುಲಪತಿ ಎಂ ಜಗದೀಶ್ ಕುಮಾರ್ ತಿಳಿಸಿದ್ದು, ಅದೇ ದಿನ ಸಂಜೆ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಅದಕ್ಕೂ ಮೊದಲು ವಿವೇಕಾನಂದರ ಕುರಿತಾದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಸ್ವಾತಂತ್ರ್ಯ, ಅಭಿವೃದ್ಧಿ, ಶಾಂತಿಯ ಸಂದೇಶ ಸಾರುವ ಮೂಲಕ ವಿವೇಕಾನಂದರು ಯುವಕರನ್ನು ಆಕರ್ಷಿಸಿದರು. ಹೀಗಾಗಿ ಹಳೆಯ ವಿದ್ಯಾರ್ಥಿ ಗಳ ಬೆಂಬಲದೊಂದಿಗೆ ಜೆನ್‌ಎನ್ಯೂ ಕ್ಯಾಂಪಸ್‌ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ ಎಂದು ಜೆಎನ್‌ಯು ಉಪಕುಲಪತಿ ಎಂ ಜಗದೀಶ್ ಕುಮಾರ್ ತಿಳಿಸಿದ್ದಾರೆ.