Friday, 22nd November 2024

Swiggy Guinness Record: ಗಿನ್ನಿಸ್‌ ದಾಖಲೆ ಬರೆದ ಸ್ವಿಗ್ಗಿ; ಒಂದೇ ಆರ್ಡರ್‌ನಲ್ಲಿ 11 ಸಾವಿರ ವಡಾ ಪಾವ್‌ ಪಾರ್ಸೆಲ್!

ಮುಂಬೈ : ಮನೆ ಮನೆಗೆ ಫುಡ್ ಡೆಲಿವರಿ ಮಾಡಿ ದೇಶಾದ್ಯಂತ ಫೇಮಸ್ ಆದ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿ ಇದೀಗ ಗಿನ್ನಿಸ್ ದಾಖಲೆ ಮಾಡುವ ಮೂಲಕ ವಿಶ್ವಾದ್ಯಂತ ತನ್ನ ಖ್ಯಾತಿಯನ್ನು ಹರಡಿಸಿದೆ.  ಸ್ವಿಗ್ಗಿ (Swiggy sets World Record) ಫುಡ್ ಡೆಲಿವರಿ ಕಂಪನಿ ಇತ್ತೀಚೆಗೆ ʼಸಿಂಘಂ ಅಗೇನ್ʼ ತಂಡದ ಸಹಭಾಗಿತ್ವದಲ್ಲಿ ಮುಂಬೈನ ಬಡ ಮಕ್ಕಳಿಗೆ 11,000 ವಡಾ ಪಾವ್‍ಗಳನ್ನು ವಿತರಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ.

ಎನ್‌ಜಿಒ ರಾಬಿನ್ ಹುಡ್ ಆರ್ಮಿ ಬೆಂಬಲದೊಂದಿಗೆ ಮುಂಬೈನಾದ್ಯಂತ ಆಹಾರ ವಿತರಣೆ ಮಾಡುವ ಮೂಲಕ  ಹಸಿದ ಮಕ್ಕಳಿಗೆ ಸ್ವಿಗ್ಗಿ ಎಂಎಂ ಮಿಠಾಯಿವಾಲಾ ಅವರ ಪ್ರಸಿದ್ಧ ಫಾಸ್ಟ್ ಫುಡ್ ವಡಾ ಪಾವ್‌ಗಳನ್ನು ನೀಡಿದೆ. ಮೊದಲ ಆರ್ಡರ್‌ನಲ್ಲಿ  ಸ್ವಿಗ್ಗಿ ವಿಲೆ ಪಾರ್ಲೆಯ ಏರ್ ಪೋರ್ಟ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ವಡಾ ಪಾವ್‍ಗಳನ್ನು ವಿತರಿಸಲಾಯಿತು. ಅಜಯ್ ದೇವಗನ್, ರೋಹಿತ್ ಶೆಟ್ಟಿ ಮತ್ತು ಸ್ವಿಗ್ಗಿ ಸಹ ಸಂಸ್ಥಾಪಕ ಫಣಿ (Phani)ಕಿಶನ್ ಈ ಆರ್ಡರ್ ಸ್ವೀಕರಿಸಿದ್ದರು. ಬಾಂದ್ರಾ, ಜುಹು, ಅಂಧೇರಿ ಈಸ್ಟ್ (ಚಾಂದಿವಲಿ ಮತ್ತು ಚಕಲಾ), ಮಲಾಡ್ ಮತ್ತು ಬೊರಿವಲಿಯ ರಾಬಿನ್ ಹುಡ್ ಆರ್ಮಿ ಬೆಂಬಲಿತ ಶಾಲೆಗಳಲ್ಲಿ ವಡಾ ಪಾವ್‍ಗಳನ್ನು ವಿತರಿಸಲಾಯಿತು.

ಈ ಬಗ್ಗೆ ಟ್ವೀಟ್ ಮಾಡಿರುವ ಫಣಿ ಕಿಶನ್, “@Swiggy ಸಿಂಗಂ ಅವರನ್ನು ಭೇಟಿಯಾದಂತಹ ಈ ಸಂದರ್ಭದಲ್ಲಿ ಮುಂಬೈನಾದ್ಯಂತದ ರಾಬಿನ್ ಹುಡ್ ಆರ್ಮಿ ಶಾಲೆಗಳಲ್ಲಿ ಮಕ್ಕಳಿಗೆ ಒಂದೇ ಆರ್ಡರ್‌ನಲ್ಲಿ 11,000 ವಡಾ ಪಾವ್‍ಗಳನ್ನು ಡೆಲಿವರಿ ಮಾಡುವ ಮೂಲಕ ಸ್ವಿಗ್ಗಿ @GWR ದಾಖಲೆಯನ್ನು ಸೃಷ್ಟಿಸಿದೆ. ಈ ಅದ್ಭುತವಾದ ಸಾಧನೆಯನ್ನು ನಾವು ಹೊಸದಾಗಿ ಪ್ರಾರಂಭಿಸಿದ ಎಕ್ಸ್ಎಲ್ ಫ್ಲೀಟ್‍ ಸಾಧ್ಯವಾಗಿಸಿದೆ. ಈ ಎಕ್ಸ್ಎಲ್ ಫ್ಲೀಟ್‍ ಅನ್ನು ಎಲ್ಲಾ ಹಬ್ಬ ಮತ್ತು ಪಾರ್ಟಿಗಳಿಗೆ ಬೇಕಾದ ಹೆಚ್ಚಿನ ಪ್ರಮಾಣದ ಫುಡ್ ಆರ್ಡರ್‌ಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ದಾಖಲೆಯ ಮೂಲಕ ಎಕ್ಸ್ಎಲ್ ನಿಜವಾದ ಸಿಂಘಂ ಎನಿಸಿಕೊಂಡಿದೆ” ಎಂದು ಅವರು ಖುಷಿ ಹಂಚಿಕೊಂಡರು.

Swiggy sets Guinness World Record

ಇದನ್ನೂ ಓದಿ:  ಪತ್ನಿಯ ಸುರಕ್ಷತೆಗಾಗಿ ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಪತಿ; ಕಂಡಿದ್ದು ನೋಡಬಾರದ ದೃಶ್ಯ!

ಸ್ವಿಗ್ಗಿಯ ಸಹಯೋಗದ ಬಗ್ಗೆ ಮಾತನಾಡಿದ ʼಸಿಂಘಂ ಅಗೇನ್ʼ ನಿರ್ದೇಶಕ ರೋಹಿತ್ ಶೆಟ್ಟಿ “ಮಕ್ಕಳಿಗೆ ಆಹಾರದ ಜೊತೆಗೆ ಸಂತೋಷವನ್ನು ನೀಡಿದ ವಡಾ ಪಾವ್‍ನ ಈ ದಾಖಲೆಯ ವಿತರಣೆಯಲ್ಲಿ ಸ್ವಿಗ್ಗಿಯೊಂದಿಗೆ ಕೈಜೋಡಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಉತ್ತಮವಾದ  ವ್ಯಕ್ತಿತ್ವ ಮತ್ತು ಬಲವಾದ ನೈತಿಕತೆಯನ್ನು ಹೊಂದಿರುವ ಸಿಂಘಂ ಅವರ ಜೀವನಶೈಲಿಯಂತೆಯೇ  ಈ ಕಾರ್ಯವು ಒಂದು ಅರ್ಥಪೂರ್ಣ ಉದ್ದೇಶವನ್ನು ಸಾಧಿಸಿದೆ “ ಎಂದಿದ್ದಾರೆ. ವಿವರಗಳ ಪ್ರಕಾರ, ದೀನದಲಿತ ಮಕ್ಕಳಿಗೆ ಆಹಾರವನ್ನು ನೀಡುವ ಈ ಕಲ್ಪನೆಯನ್ನು ಹವಾಸ್ ಪ್ಲೇ ರೂಪಿಸಿ ಕಾರ್ಯಗತಗೊಳಿಸಿದೆ ಎನ್ನಲಾಗಿದೆ.