Friday, 18th October 2024

Tamannaah Bhatia: ಬರೋಬ್ಬರಿ 455 ಕೋಟಿ ರೂ ಸ್ಕ್ಯಾಮ್‌; ನಟಿ ತಮನ್ನಾಗೆ ED ಡ್ರಿಲ್‌

tamanna bhatia

ಗುವಾಹಟಿ: ಅಕ್ರಮ ಹಣ ವರ್ಗಾವಣೆ ಪ್ರಕರಣ(Money Laundering)ಕ್ಕೆ ಸಂಬಂದಿಸಿದಂತೆ ಬಹುಭಾಷಾ ನಟಿ ತಮನ್ನಾ ಭಾಟಿಯಾ(Tamannaah Bhatia) ಅವರನ್ನು ಜಾರಿ ನಿರ್ದೇಶನಾಲಯ (ED) ವಿಚಾರಣೆಗೊಳಪಡಿಸಿದೆ. HPZ ಟೋಕನ್ ಮಹಾದೇವ್ ಆ್ಯಪ್‌ ವಿರುದ್ಧ ಕೇಳಿಬಂದಿರುವ ಬರೋಬ್ಬರಿ 455ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮನ್ನಾ ನಂಟು ಹೊಂದಿರುವ ಆರೋಪ ಇದೆ, ಹೀಗಾಗಿ ಅವರನ್ನು ಗುವಾಹಟಿಯಲ್ಲಿ ವಿಚಾರಣೆಗೊಳಪಡಿಸಲಾಗಿದೆ.

ಫೇರ್‌ಪ್ಲೇ ಬೆಟ್ಟಿಂಗ್ ಅಪ್ಲಿಕೇಶನ್ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಅಕ್ರಮ ವೀಕ್ಷಣೆಯನ್ನು ಉತ್ತೇಜಿಸುವ ಆರೋಪದ ವಿಚಾರಣೆಯ ಭಾಗವಾಗಿ ತಮನ್ನಾ ಅವರು ತಮ್ಮ ತಾಯಿಯೊಂದಿಗೆ ನಿನ್ನೆ ಮಧ್ಯಾಹ್ನ 1:30 ರ ಸುಮಾರಿಗೆ ಇಡಿ ಮುಂದೆ ಹಾಜರಾಗಿದ್ದರು. ಫೇರ್‌ಪ್ಲೇ ಮಹಾದೇವ್ ಆ್ಯಪ್‌ನ ಅಂಗಸಂಸ್ಥೆಯಾಗಿದ್ದು, ಇದು ಕ್ರಿಕೆಟ್ ಮತ್ತು ಪೋಕರ್‌ನಂತಹ ಕ್ರೀಡೆಗಳಲ್ಲಿ ಅಕ್ರಮ ಬೆಟ್ಟಿಂಗ್‌ನಲ್ಲಿ ತೊಡಗಿರುವ ಆರೋಪ ಎದುರಿಸುತ್ತಿದೆ.

ಇಡಿ ಬೆಟ್ಟಿಂಗ್ ಮತ್ತು ಗೇಮಿಂಗ್ ಅಪ್ಲಿಕೇಶನ್‌ಗಳ ಮೇಲೆ ತೀವ್ರ ನಿಗಾ ಇಟ್ಟಿದ್ದು, ಚೀನೀ ಪ್ರಜೆಗಳಿಗೆ ಸಂಬಂಧಿಸಿದ 76 ಸಂಸ್ಥೆಗಳಿ ಸೇರಿದಂತೆ ಒಟ್ಟು 299 ಸಂ‍ಸ್ಥೆಗಳ ವಿರುದ್ಧ ತನಿಖೆ ನಡೆಸುತ್ತಿದೆ. ಕಳೆದ ವರ್ಷ, ಈ ಮಹಾದೇವ್‌ ಅಪ್ಲಿಕೇಶನ್‌ ಜತೆ ನಂಟು ಹೊಂದಿರುವ ಆರೋಪದಲ್ಲಿ ನಟರಾದ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಸೇರಿದಂತೆ ಒಟ್ಟು 17ಬಾಲಿವುಡ್‌ ತಾರೆಯರನ್ನು ಇಡಿ ತನಿಖೆಗೊಳಪಡಿಸಲಾಗಿತ್ತು.

ಏಪ್ರಿಲ್ 2024 ರಲ್ಲಿ ಸಾಹಿಲ್ ಖಾನ್ ಬಂಧನದ ನಂತರ ಪ್ರಕರಣ ತೀವ್ರಗೊಂಡಿತು, ಅವರು ಮತ್ತೊಂದು ಬೆಟ್ಟಿಂಗ್ ಬ್ರ್ಯಾಂಡ್‌ಗೆ ಬ್ರಾಂಡ್ ಅಂಬಾಸಿಡರ್‌ ಆಗಿದ್ದರು. ಆದರೆ ಅಕ್ರಮ ಹಣ ವರ್ಗಾವಣೆಯಲ್ಲಿ ತಮ್ಮ ನೇರ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿದರು. ಕಪಿಲ್ ಶರ್ಮಾ, ಹುಮಾ ಖುರೇಷಿ ಮತ್ತು ಹಿನಾ ಖಾನ್ ಅವರಂತಹ ಇತರ ಪ್ರಸಿದ್ಧ ವ್ಯಕ್ತಿಗಳನ್ನು ಸಹ ಮಹಾದೇವ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುವಲ್ಲಿ ತಮ್ಮ ಪಾತ್ರಗಳನ್ನು ಮತ್ತು ಅವರು ಸ್ವೀಕರಿಸಿದ ಹಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಇಡಿ ಆದೇಶಿಸಿತ್ತು.

₹ 57,000 ಹೂಡಿಕೆ ಮಾಡಿದರೆ ಮೂರು ತಿಂಗಳವರೆಗೆ ದಿನಕ್ಕೆ ₹ 4,000 ಆದಾಯವನ್ನು ಭರವಸೆ ನೀಡುವ ಮೂಲಕ HPZ ಟೋಕನ್ ಅಪ್ಲಿಕೇಶನ್ ಹೂಡಿಕೆದಾರರನ್ನು ವಂಚಿಸಿದೆ. ಆರಂಭದಲ್ಲಿ ಭಾರೀ ಭರವಸೆ ನೀಡಿ ಬಳಿಕ ಹೂಡಿಕೆ ಹೆಚ್ಚು ಮಾಡುವಂತೆ ಕೇಳಿತ್ತು ಎಂದು ED ವರದಿ ಮಾಡಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ರಾಷ್ಟ್ರವ್ಯಾಪಿ ರೇಡ್‌ ನಡೆಸಿ ₹455 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Tamannaah Bhatia: ಮೇಕಪ್ ಇಲ್ಲದೆ ಕಾಣಿಸಿಕೊಂಡ ಮಿಲ್ಕ್ ಬ್ಯೂಟಿ ತಮನ್ನಾ; ಹೇಗಿದ್ದಾರೆ ನೋಡಿ…