ಚೆನ್ನೈ: ಕಾರಿನೊಳಗಡೆ ಒಂದೇ ಕುಟುಂಬದ ಐವರ ಶವ ಪತ್ತೆಯಾಗಿರುವ ಘಟನೆ ತಮಿಳುನಾಡಿನ(Tamilnadu Horror) ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ(Self harming)ಯಂತೆ ಕಾಣುತ್ತಿದೆ. ತಿರುಚ್ಚಿ-ಕರೈಕುಡಿ ರಾಷ್ಟ್ರೀಯ ಹೆದ್ದಾರಿ ಬಳಿ ಈ ಕಾರು ಪತ್ತೆಯಾಗಿದ್ದು, ಅದರೊಳಗೆ ಐವರ ಶವ ಇರುವುದು ಗಮನಕ್ಕೆ ಬಂದಿದೆ.
ಹೆದ್ದಾರಿ ಬಳಿ ಪಾರ್ಕ್ ಮಾಡಿದ್ದ ಕಾರನ್ನು ಕಂಡು ಜನ ಅನುಮಾನಗೊಂಡಿದ್ದರು. ಕಾರಿನ ಬಳಿ ಹೋಗಿ ನೋಡಿದಾಗ ಅದರೊಳಗೆ ಐವರ ಶವ ಇರುವುದನ್ನು ಕಂಡು ಜನ ದಂಗಾಗಿದ್ದಾರೆ. ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಇದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಈ ಐವರು ಕಾರನ್ನು ಲಾಕ್ ಮಾಡಿಕೊಂಡು ಬಳಿಕ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.
ಕುಟುಂಬದ ಸದಸ್ಯರು ಪುದುಕೊಟ್ಟೈ ಜಿಲ್ಲೆಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಸೇಲಂ ನಿವಾಸಿಗಳಾಗಿದ್ದು, ಮೃತರನ್ನು 50 ವರ್ಷದ ಉದ್ಯಮಿ ಮಣಿಕಂದನ್, ಅವರ ಪತ್ನಿ ನಿತ್ಯ, ತಾಯಿ ಸರೋಜಾ ಮತ್ತು ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತರು ವಿಷ ಸೇವಿಸಿದ್ದಾರೆ ಎಂದು ಸೂಚಿಸಿದ್ದರೂ, ಅವರ ಸಾವಿಗೆ ನಿಖರವಾದ ಕಾರಣವನ್ನು ಪುದುಕ್ಕೊಟ್ಟೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ದೃಢಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಡೆಟ್‌ನೋಟ್ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಲಗಾರರಿಂದ ಕುಟುಂಬವು ಆರ್ಥಿಕ ಒತ್ತಡಕ್ಕೆ ಒಳಗಾಗಿದೆಯೇ ಎಂದು ಅವರು ತನಿಖೆ ನಡೆಸುತ್ತಿದ್ದಾರೆ. ಮಣಿಕಂದನ್ ಲೋಹ ವ್ಯಾಪಾರದಲ್ಲಿ ತೊಡಗಿದ್ದರು. ಸಾಲಬಾಧೆಗೆ ಸಿಲುಕಿ ಇಂತಹ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
#BreakingNews: Family of 5 found dead in locked car in #TamilNadu
— Mirror Now (@MirrorNow) September 25, 2024
Car was found on Pudukottai-Madurai highway
Initial probe points to financial stress @dharannniii brings in more info | @iSamiakapoor pic.twitter.com/Eld06RSSCC
ಕಳೆದ ವರ್ಷ ಜಮ್ಮುವಿನಲ್ಲೂ ಇಂತಹದ್ದೇ ಒಂದು ಘಟನೆ ನಡೆಸಿತ್ತು. ನಗರ ಹೊರವಲಯದ ಎರಡು ಮನೆಗಳಲ್ಲಿ ಒಂದೇ ಕುಟುಂಬದ ಆರು ಜನರ ಶವ (Family Suicide) ಪತ್ತೆಯಾಗಿತ್ತು. ಇವರು, ಆತ್ಮಹತ್ಯೆಗೆ ಶರಣಾಗಿದ್ದರು. ಜಮ್ಮು ನಗರ ಹೊರವಲಯದ ತವಿ ವಿಹಾರದಲ್ಲಿರುವ ಒಂದು ಮನೆಯಲ್ಲಿ ಇಬ್ಬರು ಹಾಗೂ ಮತ್ತೊಂದು ನಿವಾಸದಲ್ಲಿ ನಾಲ್ಕು ಶವಗಳು ಪತ್ತೆಯಾಗಿತ್ತು. ತನಿಖೆ ವೇಳೆ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಮೃತರನ್ನು ಸಕೀನಾ ಬೇಗಂ, ಇವರ ಇಬ್ಬರು ಪುತ್ರಿಯರಾದ ನಸೀಮಾ ಅಖ್ತರ್, ರುಬಿನಾ ಬಾನೊ, ಪುತ್ರ ಜಾಫರ್ ಸಲೀಮ್, ಸಂಬಂಧಿಕರಾದ ನೂರ್ ಉಲ್ ಹಬೀಬ್ ಹಾಗೂ ಸಾಜದ್ ಅಹ್ಮದ್ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನು ಓದಿ: Bengaluru murder: ಮಹಾಲಕ್ಷ್ಮಿ ಕೊಲೆ ಪ್ರಕರಣ; ಪೊಲೀಸರಿಗೆ ಹೆದರಿ ಆರೋಪಿ ಆತ್ಮಹತ್ಯೆ!