ಚೆನ್ನೈ: ತಮಿಳುನಾಡು ಸರ್ಕಾರ ರಾಮ ಮಂದಿರ ಉದ್ಘಾಟನೆಯ ನೇರ ಪ್ರಸಾರಕ್ಕೆ ಹಾಕಲಾಗಿದ್ದ ಎಲ್‌ಇಡಿ ಪರದೆಗಳನ್ನು ತೆರವು ಮಾಡಿದೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯುತ್ತಿರುವ ರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರಕ್ಕೆ ಅನುಮತಿ ನೀಡಲು ತಮಿಳುನಾಡಿ ನಲ್ಲಿರುವ ಡಿಎಂಕೆ ಸರ್ಕಾರ ನಿರಾಕರಿಸಿತು.
ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಅರ್ಜಿಗಳನ್ನು ಆಲಿಸಿದ ನ್ಯಾಯಾಲಯ, ನೇರಪ್ರಸಾರದ ಅನುಮತಿಯನ್ನು ತಿರಸ್ಕರಿಸದಂತೆ ಸರ್ಕಾರಕ್ಕೆ ಆದೇಶ ನೀಡಿದೆ. ಆದರೆ, ಇದನ್ನು ಡಿಎಂಕೆ ಸರ್ಕಾರ ಉಲ್ಲಂಘಿಸಿದೆ.
ತಮಿಳುನಾಡಿನ ಕಾಮಾಕ್ಷಿ ಮಂದಿರದಲ್ಲಿ ನೇರ ಪ್ರಸಾರಕ್ಕಾಗಿ ಅಳವಡಿಸಲಾಗಿದ್ದ ಎಲ್‌ಇಡಿ ಪರದೆಗಳನ್ನು ಪೊಲೀಸರು ತೆರವು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ.
ಸರ್ಕಾರದ ಈ ಕ್ರಮವನ್ನು ಖಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರವು ಹಿಂದುಗಳ ಹಕ್ಕುಗಳನ್ನು, ಧಾರ್ಮಿಕ ಹಬ್ಬಗಳನ್ನು ದಮನ ಮಾಡುತ್ತಿದೆ ಎಂದು ಕಿಡಿ ಕಾರಿದರು.