ಪಣಜಿ : ಏಪ್ರಿಲ್ 27 ರಂದು ತೆಹಲ್ಕಾ ನಿಯತಕಾಲಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ಅವರ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಗೋವಾದ ಸೆಷನ್ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
2013 ರಲ್ಲಿ ನಿಯತಕಾಲಿಕೆ ಗೋವಾದ ಪಂಚತಾರಾ ಹೋಟೇಲ್ ನಲ್ಲಿ ಆಯೋಜಿಸಿದ್ದ ಸಂದರ್ಭ, ಲಿಫ್ಟ್ನೊಳಗೆ ತನ್ನ ಸಹೋ ದ್ಯೋಗಿಯೊಬ್ಬರಿಗೆ ತರುಣ್ ತೇಜ್ ಪಾಲ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪಿಸಲಾಗಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕ್ಷಮಾ ಜೋಶಿ ತರುಣ್ ತೇಜ್ಪಾಲ್ ಪ್ರಕರಣ ದಲ್ಲಿ ಅಂತಿಮ ವಾದಗಳನ್ನು ಆಲಿಸಿ ತೀರ್ಪಿನ ಮುಂದಕ್ಕೆ ದೂಡಿದ್ದರು. ಪ್ರಕರಣದ ತೀರ್ಪನ್ನು ಗೋವಾ ಸೆಷನ್ ನ್ಯಾಯಾಲಯ ಏಪ್ರಿಲ್ 27ರಂದು ಪ್ರಕಟಿಸಲಿದೆ.