Thursday, 19th September 2024

Tata Motors : ಟಾಟಾ ಕಾರುಗಳು ಉತ್ಸವ ಆರಂಭ, ಎಸ್‌ಯುವಿಗಳ ಮೇಲೆ ಭರ್ಜರಿ ಆಫರ್‌ಗಳು

Tata Motors

ಬೆಂಗಳೂರು : ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ (Tata Motors) ಈ ವರ್ಷದ ಹಬ್ಬದ ಸೀಸನ್‌ನಲ್ಲಿ ತನ್ನ ಕಾರುಗಳ ಮೇಲೆ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುವ ಅತಿದೊಡ್ಡ ‘ಕಾರ್ ಗಳ ಉತ್ಸವ’ವನ್ನು ಪ್ರಾರಂಭಿಸಿದೆ. ಈ ಉತ್ಸವದಲ್ಲಿ ಟಾಟಾದ ಹಲವಾರು ಜನಪ್ರಿಯ ಕಾರುಗಳು ಮತ್ತು ಎಸ್‌ಯುವಿಗಳು ಅಚ್ಚರಿಗೊಳಿಸುವ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ. ಅದಲ್ಲದೇ ಟಾಟಾ ಶೋರೂಮ್‌ಗಳಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಅನೇಕ ಕೊಡುಗೆಗಳನ್ನು ನೀಡಲಾಗುತ್ತದೆ.

ಕಾರ್‌ಗಳ ಉತ್ಸವದಲ್ಲಿ ಗ್ರಾಹಕರು ₹ 2.05 ಲಕ್ಷದವರೆಗಿನ ಒಟ್ಟು ಪ್ರಯೋಜನ ಪಡೆಯಬಹುದಾಗಿದ್ದು, ಗ್ರಾಹಕರಿಗೆ ತಮ್ಮ ಕನಸಿನ ಕಾರು ಖರೀದಿಸಲು ಇದು ಸುವರ್ಣಾವಕಾಶ. ಈ ಹಬ್ಬದ ಕೊಡುಗೆಗಳು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಕಾರುಗಳು ಮತ್ತು ಎಸ್‌ಯುವಿಗಳ ಮೇಲೆ 31 ಅಕ್ಟೋಬರ್ 2024ರವರೆಗೆ ಮಾತ್ರ ಲಭ್ಯವಿರುತ್ತದೆ.

ಈ ಸುದ್ದಿಯನ್ನೂ ಓದಿ: Guinness World Record : ಒಂದು ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ; ಮರ್ಸಿಡೀಸ್‌ ಕಾರಿನ ಹೊಸ ದಾಖಲೆ

ಕಾರುಗಳ ಉತ್ಸವ ಕುರಿತು ಮಾತನಾಡಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಶ್ರೀ ವಿವೇಕ್ ಶ್ರೀವತ್ಸ “ಹಬ್ಬದ ಸೀಸನ್ ಆರಂಭವಾಗಿರುವ ಈ ಸಂದರ್ಭದಲ್ಲಿ ನಮ್ಮ ಅಮೂಲ್ಯ ಗ್ರಾಹಕರಿಗೆ ಆಕರ್ಷಕ ಆಫರ್‌ಗಳನ್ನು ಒದಗಿಸಲು ನಾವು ಮುಂದಾಗಿದ್ದೇವೆ. ಈ ವರ್ಷದ ಹಬ್ಬದ ಸಂದರ್ಭದಲ್ಲಿ ಸೀಮಿತ ಅವಧಿಯ ಬೆಲೆ ರಿಯಾಯಿತಿ ಪಡೆಯಬಹುದಾಗಿದ್ದು, ಐಸಿಇ ವಾಹನಗಳ ಮೇಲೆ ₹ 2.05 ಲಕ್ಷದವರೆಗಿನ ಒಟ್ಟು ಪ್ರಯೋಜನಗಳನ್ನು ಪಡೆಯಬಹುದು. ಅದರ ಜೊತೆಗೆ ಆಕರ್ಷಕ ಎಕ್ಸ್ ಚೇಂಜ್ ಆಫರ್ ಮತ್ತು ಕ್ಯಾಶ್‌ ಬೆನಿಫೀಟ್‌ ಕೂಡ ಲಭ್ಯವಿರುತ್ತದೆ. ಹೊಸ ಆರಂಭಕ್ಕೆ ಇದು ಪರಿಪೂರ್ಣ ಸಂದರ್ಭ. ಗ್ರಾಹಕರು ಟಾಟಾ ಕಾರನ್ನು ಹೊಂದಲು ಈ ಸುವರ್ಣಾವಕಾಶ ಬಳಸಿಕೊಳ್ಳುತ್ತಾರೆ, ಉತ್ತಮ ಸುರಕ್ಷತೆ ಮತ್ತು ವಿನ್ಯಾಸ ಹೊಂದಿರುವ ಕಾರನ್ನು ಮನೆಗೆ ತರುತ್ತಾರೆ ಮತ್ತು ಈ ಹಬ್ಬದ ಋತುವನ್ನು ನಿಜವಾಗಿಯೂ ವಿಶೇಷವಾಗಿಸುತ್ತಾರೆ ಎಂದು ನಾವು ನಂಬಿದ್ದೇವೆ,” ಎಂದು ಹೇಳಿದರು.

ಕೆಲವು ಮಾಡೆಲ್ ಗಳ ಆರಂಭಿಕ ಬೆಲೆಗಳು ಇಲ್ಲಿವೆ

 ಟಿಯಾಗೋ ₹ 4.99 ಲಕ್ಷ
 ಟಿಗೋರ್ ₹ 5.99 ಲಕ್ಷ
 ಆಲ್ಟ್ರೋಜ್ ₹6.49 ಲಕ್ಷ
 ನೆಕ್ಸಾನ್ ₹7.99 ಲಕ್ಷ
 ಹ್ಯಾರಿಯರ್ ₹14.99 ಲಕ್ಷ
 ಸಫಾರಿ ₹15.49 ಲಕ್ಷ
•ಟಾಟಾ ಶೋರೂಮ್‌ ಗಳಲ್ಲಿ ₹ 45,000 ವರೆಗಿನ ಎಕ್ಸ್ ಚೇಂಜ್ ಆಫರ್ ಸೇರಿದಂತೆ ಇತರ ಕೊಡುಗೆಗಳು ಕೂಡ ಲಭ್ಯವಿದೆ