Thursday, 12th December 2024

ನಾಲ್ಕನೇ ತ್ರೈಮಾಸಿಕ: ಟಾಟಾ ಮೋಟಾರ್ಸ್‌’ಗೆ 7,605 ಕೋಟಿ ರೂ ನಷ್ಟ

ನವ ದೆಹಲಿ : ದೇಶದ ವಾಹನ ಉತ್ಪಾದಕ ಸಂಸ್ಥೆ ಟಾಟಾ ಮೋಟಾರ್ಸ್ ತ್ರೈಮಾಸಿಕ ನಿವ್ವಳ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಮಾರ್ಚ್ 31ಕ್ಕೆ ಮುಕ್ತಾಯಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 7,605 ಕೋಟಿ ನಿವ್ವಳ ನಷ್ಟ ಅನುಭವಿಸಿದೆ ಎಂದು ತನ್ನ ತ್ರೈಮಾಸಿಕ ವರದಿ ತಿಳಿಸಿದೆ. ಟಾಟಾ ಮೋಟಾರ್ಸ್ ನ ಒಟ್ಟು ನಿವ್ವಳ ಲಾಭ 2,774.10 ಕೋಟಿ ರೂ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಅಂದಾಜು 87, 517.8 ಕೋಟಿ ಲಾಭ ಗಳಿಕೆಯನ್ನು ನಿರೀಕ್ಷಿಸಿತ್ತು ಎಂದು ವರದಿ ಹೇಳಿದೆ.

ಟಾಟಾ ಕಳೆದ ವರ್ಚದ ನಾಲ್ಕನೇ ತ್ರೈಮಾಸಿಕದಲ್ಲಿ ಸುಮಾರು 9,894.25 ಕೋಟಿ ರೂಪಾಯಿ ಹಾಗೂ 2020 ರ ಮೂರನೇ ತ್ರೈಮಾಸಿಕದಲ್ಲಿ 2,906.45 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಆದರೆ, ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 7,605 ಕೋಟಿಯಷ್ಟು ನಿವ್ವಳ ನಷ್ಟ ಅನುಭವಿಸಿದೆ.