Friday, 22nd November 2024

ಕೇರಳ: ಮದ್ಯದ ಮೇಲಿನ ಮಾರಾಟ ತೆರಿಗೆಯಲ್ಲಿ ಏರಿಕೆ..?

ತಿರುವನಂತಪುರಂ: ಮದ್ಯದ ಮೇಲಿನ ಮಾರಾಟ ತೆರಿಗೆಯನ್ನು ಕೇರಳ ಸರ್ಕಾರವು ಶೇ. 4ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿ ರುವುದರಿಂದ ಭಾರತೀಯ ನಿರ್ಮಿತ ವಿದೇಶಿ ಮದ್ಯದ (ಐಎಂಎಫ್‌ಎಲ್) ಬೆಲೆ ಮುಂಬರುವ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸಚಿವ ಸಂಪುಟ ಸಭೆಯಲ್ಲಿ ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕೇರಳದೊಳಗೆ ವಿದೇಶಿ ಮದ್ಯ ತಯಾ ರಿಸುವ ಮತ್ತು ಮಾರಾಟ ಮಾಡುವ ಡಿಸ್ಟಿಲರ್‌ಗಳ ಮೇಲೆ ವಿಧಿಸಲಾದ 5% ವಹಿವಾಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

 

ವಹಿವಾಟು ತೆರಿಗೆಯನ್ನು ಮನ್ನಾ ಮಾಡುವ ನಿರ್ಧಾರವು ರಾಜ್ಯಕ್ಕೆ ಆದಾಯದ ನಷ್ಟ ವನ್ನು ಉಂಟು ಮಾಡುತ್ತದೆ. ಪ್ರಸ್ತುತ ಕೇರಳದ ಸಾಮಾನ್ಯ ಮಾರಾಟವನ್ನು ಹೆಚ್ಚಿಸುವ ಮೂಲಕ ಶೇ. 4ರಷ್ಟು ಹೆಚ್ಚಳವಾಗುವ ತೆರಿಗೆ ದರ ಸರಿದೂಗಿಸಲು ಪ್ರಯತ್ನಿಸು ತ್ತದೆ. ಅದಕ್ಕಾಗಿ ಕೇರಳದ ಸಾಮಾನ್ಯ ಮಾರಾಟ ತೆರಿಗೆ ಕಾಯ್ದೆ 1963ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಹಣಕಾಸು ನಿಗಮದಿಂದ ಹಣವನ್ನು ಪಡೆಯಲು ಅವಕಾಶ ನೀಡಲು ಹಾಗೂ ಕೇರಳ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂಪಾಯಿ ಹೆಚ್ಚುವರಿ ಸರ್ಕಾರಿ ಗ್ಯಾರಂಟಿ ನೀಡಲು ಕೇರಳ ಕ್ಯಾಬಿನೆಟ್ ನಿರ್ಧರಿಸಿದೆ.