Friday, 22nd November 2024

ದ್ರೌಪದಿಗೆ ತೆಲುಗು ದೇಶಂ ಪಕ್ಷ ಬೆಂಬಲ

ಅಮರಾವತಿ: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ತೆಲುಗು ದೇಶಂ ಪಕ್ಷ ಸೋಮವಾರ ಘೋಷಿಸಿದೆ.

ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಅವರು ಪಕ್ಷದ ನೀತಿ ನಿರೂಪಣಾ ಸಮಿತಿ ಸಭೆಯಲ್ಲಿ ಈ ಘೋಷಣೆ ಮಾಡಿ ದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಟಿಡಿಪಿ ಯಾವಾಗಲೂ ಸಾಮಾಜಿಕ ನ್ಯಾಯದ ಪರ ನಿಲ್ಲುತ್ತದೆ. ಈ ಹಿಂದೆ ಕೆ.ಆರ್‌. ನಾರಾಯಣನ್‌ ಮತ್ತು ಎ.ಪಿ.ಜೆ.ಅಬ್ದುಲ್‌ ಕಲಾಂ ಅವರಿಗೆ ಬೆಂಬಲ ನೀಡಿತ್ತು. ಅದೇ ರೀತಿ ಆದಿವಾಸಿ ಮಹಿಳೆ, ದ್ರೌಪದಿ ಮುರ್ಮು ಅವರನ್ನು ಪಕ್ಷವು ಬೆಂಬಲಿಸಲಿದೆ’ ಎಂದು ತಿಳಿಸಿದ್ದಾರೆ.

ಟಿಡಿಪಿ ರಾಜ್ಯಸಭೆಯಲ್ಲಿ ಒಂದು ಸ್ಥಾನ, ಲೋಕಸಭೆಯಲ್ಲಿ 3 ಸ್ಥಾನ ಹಾಗೂ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ 23 ಸದಸ್ಯರ ಬಲ ಹೊಂದಿದೆ.