Sunday, 15th December 2024

ಜಮ್ಮು-ಕಾಶ್ಮೀರದ ಸರ್ಕಾರ ಟೀಕಿಸಿದ ಶಿಕ್ಷಕ ಅಮಾನತು

ಶ್ರೀನಗರ: ಸಾಮಾಜಿಕ ಮಾಧ್ಯಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರವನ್ನು ಟೀಕಿ ಸಿದ ಶಿಕ್ಷಕನೊಬ್ಬನನ್ನು ಅಮಾನತು ಗೊಳಿಸಲಾಗಿದೆ.

ರಾಂಬನ್ ಜಿಲ್ಲೆಯ ಶಾಲಾ ಶಿಕ್ಷಕ ಜೋಗಿಂದರ್ ಸಿಂಗ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಕೇಂದ್ರಾಡಳಿತ ಪ್ರದೇಶದ ಆಡಳಿತದ ನೀತಿಗಳನ್ನು ಟೀಕಿಸಿ ಕೆಲವು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೇ ಆಡಳಿತವು ಶಿಕ್ಷಕನನ್ನು ಅಮಾ ನತು ಮಾಡಿದೆ.

ಆಡಳಿತವು ಹೊರಡಿಸಿದ ಆದೇಶದ ಪ್ರಕಾರ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ‘ನೀತಿ ಗಳ ಟೀಕೆಗೆ ಸಂಬಂಧಿಸಿದಂತೆ’ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷಕ ಜೋಗಿಂದರ್ ಸಿಂಗ್‌ನನ್ನು ಅಮಾನತುಗೊಳಿಸಲಾಗಿದೆ.

ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ಕಳೆದ ವಾರ ತನ್ನ ನೀತಿಗಳನ್ನು ಸಾಮಾ ಜಿಕ ಮಾಧ್ಯಮದಲ್ಲಿ ಟೀಕಿಸುವುದರ ವಿರುದ್ಧ ನೌಕರರಿಗೆ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಈ ಶಿಕ್ಷಕ ಸರ್ಕಾರವನ್ನು ಟೀಕಿಸಲು ಹೋಗಿ ಎಡವಟ್ಟು ಮಾಡಿಕೊಂಡಿ ದ್ದಾನೆ.