ನ್ಯಾಯಮೂರ್ತಿ ಅಭಿಜಿತ್ ಗಂಗೋಪಾದ್ಯಾಯ್ ಪಶ್ಚಿಮ ಬಂಗಾಳದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಭಷ್ಟಾಚಾರದ ಪ್ರಮಾಣ ಮಿತಿಯನ್ನು ಮೀರಿದೆ ಎಂದು ಅಭಿಪ್ರಾ ಯವನ್ನು ವ್ಯಕ್ತಡಿಸಿದ್ದಾರೆ.
” 2016ರಲ್ಲಿ ಮಂಡಳಿ 36,000ದಷ್ಟು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಅಗತ್ಯ ತರಬೇತಿ ಹೊಂದಿರಲಿಲ್ಲ. ಈ ಎಲ್ಲಾ ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ” ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ್ ನಿರ್ದೇಶನ ನೀಡಿದ್ದಾರೆ. ಈ ತೀರ್ಪು ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತ ಪಕ್ಷಕ್ಕೆ ಬಹುದೊಡ್ಡ ಮುಖಭಂಗ ಎಂದೇ ಪರಿಗಣಿಸಲಾಗುತ್ತಿದೆ.
17ಪುಟಗಳ ಈ ಆದೇಶದಲ್ಲಿ ನ್ಯಾಯಮೂರ್ತಿ ಗಂಗೋಪಾಧಯ್ ಅಭ್ಯರ್ಥಿಗಳು ಮತ್ತು ಸಂದರ್ಶಕರ ಸಾಕ್ಷ್ಯದಿಂದ ಯಾವುದೇ ಸಾಮರ್ಥ್ಯ ಪರೀಕ್ಷೆ ನಡೆದಿಲ್ಲ ಎಂಬ ಆರೋಪವು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯು ನಡೆಸಿದ 2016 ರ ನೇಮಕಾತಿ ಪ್ರಕ್ರಿಯೆಯಲ್ಲಿನ ಆಯ್ಕೆ ಪ್ರಕ್ರಿಯೆಯಲ್ಲಿನ ಸಂಪೂರ್ಣ ಅಕ್ರಮದಿಂದ ಕೂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಡಳಿ ಮತ್ತು ಅದರ ಮಾಜಿ ಅಧ್ಯಕ್ಷ ಮಾಣಿಕ್ ಭಟ್ಟಾಚಾರ್ಯ ಸೇರಿದಂತೆ ಕೆಲ ಅಧಿಕಾರಿಗಳು ಈ ನೇಮಕಾತಿಯಲ್ಲಿ ಭಾರೀ ಅಕ್ರಮ ಹಣದ ವ್ಯವಹಾರ ನಡೆದಿರುವ ಆರೋಪದಲ್ಲಿ ಬಂಧಿತರಾಗಿದ್ದಾರೆ.