Wednesday, 11th December 2024

ಟಿ20ನಲ್ಲೂ ಟೀಂ ಇಂಡಿಯಾನೇ ಕಿಂಗ್‌: ವಿರಾಟ್ ಆಟ ಪ್ರದರ್ಶಿಸಿದ ಕೊಹ್ಲಿ, ರೋ’ಹಿಟ್‌’

ಅಹಮದಾಬಾದ್: ಸರಣಿ ಗೆಲ್ಲಲು ನಿರ್ಣಾಯಕವೆನಿಸಿದ್ದ ಟಿ20 ಸರಣಿಯ 5ನೇ ಹಾಗೂ ನಿರ್ಣಾಯಕ ಹಣಾಹಣಿಯಲ್ಲಿ ಭಾರತ ತಂಡ 36 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈ ಮೂಲಕ ಚುಟುಕು ಸರಣಿಯನ್ನು 3-2 ರಿಂದ ವಶಪಡಿಸಿ ಕೊಳ್ಳುವ ಮೂಲಕ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಭರ್ಜರಿ ತಾಲೀಮು ಮಾಡಿಕೊಂಡಿತು.

ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕ ವಿರಾಟ್ ಕೊಹ್ಲಿ (80*ರನ್) ಹಾಗೂ ಉಪನಾಯಕ ರೋಹಿತ್ ಶರ್ಮ (64ರನ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಫಲವಾಗಿ 2 ವಿಕೆಟ್‌ಗೆ 224 ರನ್ ಪೇರಿಸಿತು.

ಬಳಿಕ ಡೇವಿಡ್ ಮಲಾನ್ (68ರನ್) ಹಾಗೂ ಜೋಸ್ ಬಟ್ಲರ್ (52 ರನ್) ಜೋಡಿಯ ಪ್ರತಿಹೋರಾಟದ ನಡುವೆಯೂ ಭುವೇಶ್ವರ್ ಕುಮಾರ್ (15ಕ್ಕೆ 2) ಹಾಗೂ ಶಾರ್ದೂಲ್ ಠಾಕೂರ್ (37ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್ 8 ವಿಕೆಟ್‌ಗೆ 188 ಮೊತ್ತ ಗಳಿಸಿತು.

ಭಾರತ ತಂಡ: 2 ವಿಕೆಟ್‌ಗೆ 224 (ರೋಹಿತ್ ಶರ್ಮ 64, ವಿರಾಟ್ ಕೊಹ್ಲಿ 80*, ಸೂರ್ಯಕುಮಾರ್ ಯಾದವ್ 32, ಹಾರ್ದಿಕ್ ಪಾಂಡ್ಯ 39*, ಆದಿಲ್ ರಶೀದ್ 31ಕ್ಕೆ 1, ಬೆನ್ ಸ್ಟೋಕ್ಸ್ 26ಕ್ಕೆ 1), ಇಂಗ್ಲೆಂಡ್: 8 ವಿಕೆಟ್‌ಗೆ 188 (ಜೋಸ್ ಬಟ್ಲರ್ 52, ಡೇವಿಡ್ ಮಲಾನ್ 68, ಬೆನ್ ಸ್ಟೋಕ್ಸ್ 14, ಸ್ಯಾಮ್ ಕರ‌್ರನ್ 14*, ಭುವನೇಶ್ವರ್ ಕುಮಾರ್ 15ಕ್ಕೆ 2, ಶಾರ್ದೂಲ್ ಠಾಕೂರ್ 45ಕ್ಕೆ 3, ಹಾರ್ದಿಕ್ ಪಾಂಡ್ಯ 34ಕ್ಕೆ 1).