Thursday, 12th December 2024

‘ಟೆಕ್‌ ಮಹಿಂದ್ರಾ’ ಎಂಡಿ, ಸಿಇಒ ಆಗಿ ಮೋಹಿತ್ ಜೋಶಿ ನೇಮಕ

ವದೆಹಲಿ: ಇನ್ಫೊಸಿಸ್‌ ಮಾಜಿ ಅಧ್ಯಕ್ಷ ಮೋಹಿತ್ ಜೋಶಿ ಅವರು ‘ಟೆಕ್‌ ಮಹಿಂದ್ರಾ’ ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

‘ಟೆಕ್‌ ಮಹಿಂದ್ರಾ’ ಶನಿವಾರ ಈ ಮಾಹಿತಿ ಪ್ರಕಟಿಸಿದ್ದು, ಜೋಶಿ ಅವರು ಸದ್ಯ ಎಂ.ಡಿ ಹಾಗೂ ಸಿಇಒ ಆಗಿರುವ ಸಿ.ಪಿ. ಗುರ್ನಾನಿ ಅವರ ನಿವೃತ್ತಿ ಬಳಿಕ ಹುದ್ದೆಯ ಹೊಣೆ ಹೊತ್ತುಕೊಳ್ಳಲಿದ್ದಾರೆ ಎಂದು ತಿಳಿಸಿದೆ.

ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಇನ್ಫೊಸಿಸ್‌ಗೆ ಜೋಶಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ.

‘ಸಿ.ಪಿ. ಗುರ್ನಾನಿ ಅವರು 2023ರ ಡಿಸೆಂಬರ್‌ 19ರಂದು ನಿವೃತ್ತರಾದ ಬಳಿಕ ಮೋಹಿತ್‌ ಅವರು ಎಂ.ಡಿ ಹಾಗೂ ಸಿಇಒ ಹುದ್ದೆಗಳನ್ನು ನಿಭಾಯಿಸ ಲಿದ್ದಾರೆ. ಹೊಂದಾಣಿಕೆಯ ಸಲುವಾಗಿ ಅವರು ಅದಕ್ಕೂ ಮುನ್ನವೇ ಕಂಪನಿಯನ್ನು ಕೂಡಿಕೊಳ್ಳಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.