Thursday, 12th December 2024

ತೆಲಂಗಾಣ ಹೈಕೋರ್ಟ್‌: ಮೊದಲ ಮಹಿಳಾ ಸಿಜೆಐ ಆಗಿ ಹಿಮಾ ಕೋಹ್ಲಿ

ಹೈದರಾಬಾದ್‌: ಹಿಮಾ ಕೋಹ್ಲಿ ಅವರು ತೆಲಂಗಾಣ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಗುರುವಾರ ಪ್ರಮಾಣ ಸ್ವೀಕರಿಸಿದರು.

ರಾಜ್ಯಪಾಲೆ ತಮಿಳ್‌ಸೈ ಸುಂದರ ರಾಜನ್‌ ಕೋಲಿ ಅವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿ ದರು. ಮೊದಲು ಅವರು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು.

2019ರ ಜ.1ರಿಂದ ತೆಲಂಗಾಣಕ್ಕೆ ಪ್ರತ್ಯೇಕ ಹೈಕೋರ್ಟ್‌ ಸ್ಥಾಪಿಸಲಾಗಿತ್ತು. ಅದಕ್ಕಿಂತ ಮೊದಲು ಆಂಧ್ರಪ್ರದೇಶದ ಹೈಕೋರ್ಟ್ ‌ನಲ್ಲಿಯೇ ರಾಜ್ಯದ ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು.