ಹೈದರಾಬಾದ್: ತೆಲಂಗಾಣ ಕಾಂಗ್ರೆಸ್‌ನಲ್ಲಿ ಪಕ್ಷದ ಆಂತರಿಕ ಜಗಳ ತೀವ್ರಗೊಂಡಿದ್ದು, 13 ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ವಲಸೆ ಬಂದವರು ಪ್ರಾಮುಖ್ಯತೆ ಪಡೆದಿದ್ದಾರೆ ಎಂಬ ಕೆಲ ಹಿರಿಯ ನಾಯಕರ ಹೇಳಿಕೆಯನ್ನು ಪ್ರತಿಭಟಿಸಿ, ರಾಜೀನಾಮೆ ನೀಡಿದ್ದಾರೆ. ಈ 13 ಸದಸ್ಯ ರಲ್ಲಿ ಹಾಲಿ ಕಾಂಗ್ರೆಸ್ ಶಾಸಕಿ ದಾನಸರಿ ಅನಸೂಯ ಮತ್ತು ಮಾಜಿ ಶಾಸಕ ವೆಂ ನರೇಂದ್ರ ರೆಡ್ಡಿ ಸೇರಿದ್ದಾರೆ.
ಅವಿಭಜಿತ ಆಂಧ್ರಪ್ರದೇಶದ ಮಾಜಿ ಉಪಮುಖ್ಯಮಂತ್ರಿ ದಾಮೋದರ್ ರಾಜನರಸಿಂಹ ಅವರು ಶನಿವಾರ ಕಾಂಗ್ರೆಸ್‌ಗೆ ಸೇರ್ಪಡೆ ಯಾದ ಕೆಲವು ಮಾಜಿ ತೆಲುಗು ದೇಶಂ ಪಕ್ಷದ ನಾಯಕರನ್ನು ಉಲ್ಲೇಖಿಸಿ, “ವಲಸೆ ಬಂದವರಿಗೆ ಪ್ರಾಮುಖ್ಯತೆ ನೀಡಿದರೇ, ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವ ಸಂದೇಶವನ್ನು ನೀಡಿದಂತಾಗುತ್ತದೇ? ಎಂದು ಪ್ರಶ್ನಿಸಿ ದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ನೇರವಾಗಿ ಪ್ರತಿಕ್ರಿಯಿಸದೆ, ಪಕ್ಷದ ಹೈಕಮಾಂಡ್ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.
ಜೊತೆಗೆ ತೆಲಂಗಾಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಗ್ರಾಮದಿಂದ ರಾಜ್ಯ ಮಟ್ಟದವರೆಗೆ ಪಕ್ಷದ ಮುಖಂಡರು ಜನವರಿ 26 ರಿಂದ ತೆಲಂಗಾಣದಲ್ಲಿ ‘ಪಾದಯಾತ್ರೆ’ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Read E-Paper click here