Friday, 13th December 2024

ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‍ರಾವ್ ಪುತ್ರಿ ಬಂಧನ

ವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್ ಅವರ ಪುತ್ರಿ ಕವಿತಾ ಅವರ ಮಾಜಿ ಉದ್ಯೋಗಿ ಬುಚ್ಚಿಬಾಬು ಅವರನ್ನು ಬಂಧಿಸಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬುಚ್ಚಿಬಾಬು ಕೈವಾಡವಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅವರನ್ನು ವಿಚಾರಣೆ ಗೆಂದು ತೆಲಂಗಾಣದಿಂದ ಕರೆಸಿಕೊಂಡು ಬಂಧಿಸ ಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಕಳೆದ ಡಿಸಂಬರ್ 12 ರಂದು ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದ್ರಾಬಾದ್‍ನಲ್ಲಿ ಸಿಬಿಐ ತಂಡವು ಕೆಸಿಆರ್ ಅವರ ಪುತ್ರಿ ಕವಿತಾ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ಆರ್ಥಿಕ ಅಪರಾಧಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಕೆ ಕವಿತಾ ಅವರು ಮದ್ಯ ನೀತಿ ಪ್ರಕರಣದಲ್ಲಿ ಕಿಕ್‍ಬ್ಯಾಕ್‍ ನಿಂದ ಲಾಭ ಪಡೆದ ಸೌತ್ ಕಾರ್ಟೆಲ್ ನ ಭಾಗವಾ ಗಿದ್ದರು ಎಂದು ಆರೋಪಿಸಿತ್ತು.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿರುವ ರಾಜಧಾನಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಆದೇಶಿಸಿದ ನಂತರ ಎಎಪಿ ಸರ್ಕಾರವು ಕಳೆದ ವರ್ಷ ಹೊಸ ಮದ್ಯ ನೀತಿಯನ್ನು ಹಿಂತೆಗೆದುಕೊಂಡಿತು.

ಸೌತ್ ಗ್ರೂಫ್ ಎಂದು ಕರೆಯಲ್ಪಡುವ ಲಾಬಿಯಿಂದ ಸಹಕಾರ ಮತ್ತು ಕಿಕ್‍ಬ್ಯಾಕ್‍ಗಳೊಂದಿಗೆ ದೆಹಲಿಯ ಅಬಕಾರಿ ನೀತಿಯನ್ನು ಮಾರ್ಪಡಿಸುವಾಗ ಅಕ್ರಮಗಳು ನಡೆದಿವೆ ಎಂದು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಹೇಳಿಕೊಂಡಿವೆ.

ಈ ಹಗರಣದಲ್ಲಿ ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯ ಕವಿತಾ, ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್‍ನ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಮತ್ತು ಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಹೆಸರುಗಳು ತಳಕು ಹಾಕಿಕೊಂಡಿವೆ.