Sunday, 15th December 2024

ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇವಂತ್​ ರೆಡ್ಡಿ

ಹೈದರಾಬಾದ್​: ಎಲ್​ಬಿ ಸ್ಟೇಡಿಯಂನಲ್ಲಿ ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಅವರು ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿ ದರು.

ರಾಜ್ಯಪಾಲೆ ತಮಿಳಸೈ ಸೌಂದರ್ಯರಾಜನ್​ ಅವರು ಪ್ರಮಾಣ ವಚನ ಬೋಧಿಸಿದರು.

ಜೊತೆಗೆ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಮೂರನೇವರಾಗಿ ಉತ್ತಮ್ ಕುಮಾರ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. ದಾಮೋದರ ರಾಜನರಸಿಂಹ, ಕೋಮಟಿ ರೆಡ್ಡಿ ವೆಂಕಟ ರೆಡ್ಡಿ, ದುಡ್ಡಿಲ್ಲ ಶ್ರೀಧರಬಾಬು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಸಹ ನೂತನ ಸಚಿವರಾಗಿ ಅಧಿಕಾರದ ಗೌಪ್ಯತೆಯನ್ನು ರಾಜ್ಯಪಾಲರಿಂದ ಪಡೆದುಕೊಂಡರು. ಕೊಂಡಾ ಸುರೇಖಾ, ಪೊನ್ನಂ ಪ್ರಭಾಕರ್ ಸಚಿವರಾಗಿ ಅಧಿಕಾರದ ಗೌಪ್ಯತೆ ಪಡೆದುಕೊಂಡರು.

ಸೋನಿಯಾ, ರಾಹುಲ್​ ಹಾಗೂ ಪ್ರಿಯಾಂಕಾ ಗಾಂಧಿ ಎಲ್ ಬಿ ಸ್ಟೇಡಿಯಂಗೆ ಬಂದರು. ಇವರಿಗೆ ಸಿಎಂ ರೇವಂತ ರೆಡ್ಡಿ ಸಾಥ್​ ನೀಡಿದರು. ಇದೇ ವೇಳೆ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್​ ಹಾಜರಿದ್ದರು.