Monday, 18th November 2024

Telecom standard conference: ಇಂದು ಪ್ರಧಾನಿ ಮೋದಿಯಿಂದ ಟೆಲಿಕಾಂ ಸ್ಟ್ಯಾಡರ್ಡ್‌ ಸಮ್ಮೇಳನ ಉದ್ಘಾಟನೆ

pm modi

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ(PM Narendra Modi) ಇಂದು ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ – ವರ್ಲ್ಡ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿ (ITU-WTSA)ಯನ್ನು ಉದ್ಘಾಟಿಸಲಿದ್ದಾರೆ(Telecom standard conference). ಇದಕ್ಕೂ ಮುನ್ನ ಅವರು ಭಾರತ್‌ ಮಂಟಪಕ್ಕೆ ಭೇಟಿ ನೀಡಿ ವಸ್ತು ಪ್ರದರ್ಶನವನ್ನು ಪರಿಶೀಲಿಸಿದರು ಈ ವೇಳೆ ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ(Jyotiraditya Scindia) ಕೂಡ ಇದ್ದರು.

ITU-WTSA ಎಂದರೇನು?

ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್-ವರ್ಲ್ಡ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿ (ITU-WTSA) ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಆಡಳಿತ ಸಮ್ಮೇಳನವಾಗಿದೆ. WTSA 2024 ಮುಂದಿನ ಪೀಳಿಗೆಯ ನಿರ್ಣಾಯಕ ತಂತ್ರಜ್ಞಾನಗಳಾದ 6G, AI, IoT, ಬಿಗ್ ಡೇಟಾ ಮತ್ತು ಸೈಬರ್‌ ಸುರಕ್ಷತೆಯಂತಹ ಭವಿಷ್ಯದ ಮಾನದಂಡಗಳನ್ನು ನಿರ್ಧರಿಸಲು ದೇಶಗಳಿಗೆ ವೇದಿಕೆಯನ್ನು ನೀಡುತ್ತದೆ.

ITU-WTSA ಈವೆಂಟ್ ಜಾಗತಿಕ ಟೆಲಿಕಾಂ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಮತ್ತು ಭವಿಷ್ಯದ ತಂತ್ರಜ್ಞಾನಗಳಿಗೆ ಕೋರ್ಸ್ ಅನ್ನು ಹೊಂದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಭಾರತಕ್ಕೆ ಅವಕಾಶವನ್ನು ಒದಗಿಸುತ್ತದೆ. ಭಾರತೀಯ ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನಾ ಸಂಸ್ಥೆಗಳ IPR ಮತ್ತು ಪೇಟೆಂಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ಈ ಸಮ್ಮೇಳನದಲ್ಲಿ 190ಕ್ಕೂ ಹೆಚ್ಚು ದೇಶಗಳ ಸುಮಾರು 3,000 ಉದ್ಯಮ ನಾಯಕರು ಮತ್ತು ಟೆಕ್ ತಜ್ಞರನ್ನು ಒಟ್ಟುಗೂಡಿಸಲು ಯೋಜಿಸಲಾಗಿದೆ. ಟೆಲಿಕಾಂ, ಡಿಜಿಟಲ್ ಮತ್ತು ICT ವಲಯಗಳ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: PM Modi : ಮಹಾರಾಷ್ಟ್ರದಲ್ಲಿ 7,600 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ