ಭೋಪಾಲ್: ಮಧ್ಯಪ್ರದೇಶದ ಮೊರೋನಾ ಜಿಲ್ಲೆಯಲ್ಲಿ 2 ಗ್ರಾಮದಲ್ಲಿ ವಿಷಪೂರಿತ ಮದ್ಯ ಸೇವನೆ ಮಾಡಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ನಡೆದಿದೆ.
ಮೊರೋನಾ ಜಿಲ್ಲೆಯ ಮಾನ್ಪುರಿ ಪೃಥ್ವಿ ಮತ್ತು ಪಹಾವಾಲಿ ಗ್ರಾಮಗಳಲ್ಲಿ ಈ ಸಾವು ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮನ್ಪುರಿ ಪೃಥ್ವಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ವಿಷಪೂರಿತ ಮದ್ಯ ಸೇವನೆ ಮಾಡಿದ್ದ ಹಲವರು ಇದ್ದಕ್ಕಿದ್ದಂತೆ ಅಸ್ವಸ್ಥ ರಾಗಿದ್ದರು. ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, 10 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾ ರೆಂದು ವರದಿಗಳು ತಿಳಿಸಿವೆ. 10 ಮಂದಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.