ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(Jammu-Kashmir)ದ ಅಖ್ನೂರ್ ಸೆಕ್ಟರ್(Akhnoor)ನಲ್ಲಿ ನಿನ್ನೆ ಸೇನಾ ವಾಹನದ ಮೇಲೆ ದಾಳಿ ನಡೆಸಿದ ಮೂವರು ಭಯೋತ್ಪಾದಕರನ್ನು ಸೇನೆ(Terror Attack) ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಬರೋಬ್ಬರಿ 27ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಇಂದು ಮುಕ್ತಾಯಗೊಂಡಿದ್ದು, ಮೂವರು ಉಗ್ರರ ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.
ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಸೇನಾ ವಾಹನದ ಭಾಗವಾಗಿದ್ದ ಆಂಬ್ಯುಲೆನ್ಸ್ಗೆ ಭಯೋತ್ಪಾದಕರು ಸೋಮವಾರ ಗುಂಡು ಹಾರಿಸಿದ ನಂತರ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು. ನಿನ್ನೆ ಸಂಜೆ ಮೂವರು ಎನ್ಕೌಂಟರ್ ಮಾಡಲಾಯಿತು. ಇಂದು ಮುಂದುವರೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಮಂಗಳವಾರ ಜೋಗ್ವಾನ್ ಗ್ರಾಮದ ಅಸ್ಸಾನ್ ದೇವಸ್ಥಾನದ ಬಳಿ ಹೊಡೆದುರುಳಿಸಲಾಗಿದೆ.
VIDEO | Security forces gun down both holed-up terrorists in Akhnoor Sector of Jammu and Kashmir. The terrorists had opened fire on an Army ambulance yesterday, the cordon and search operation was continuing since. #JammuandKashmir pic.twitter.com/XVv49OxWuv
— Press Trust of India (@PTI_News) October 29, 2024
ಬಟಾಲ್ ಪ್ರದೇಶದಲ್ಲಿ ಬೆಳಗ್ಗೆ 7ಗಂಟೆ ಸುಮಾರಿಗೆ ಮೂವರು ಭಯೋತ್ಪಾದಕರು ಸೇನಾ ವಾಹನದ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದರು. ತಕ್ಷಣ ಎಚ್ಚೆತ್ತ ಭದ್ರತಾ ಪಡೆಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸ್ಥಳದಲ್ಲಿಯೇ ಒಬ್ಬ ಉಗ್ರನನ್ನು ಹತ್ಯೆ ಮಾಡಿದ್ದರು. ನಂತರ ಉಳಿದ ಇಬ್ಬರು ಉಗ್ರರಿಗಾಗಿ ಶೋಧ ಮುಂದುವರಿಸಿದ್ದರು. ನಂತರ ಕಾರ್ಯಾಚರಣೆಯಲ್ಲಿ ಅಡಗಿ ಕುಳಿತಿದ್ದ ಇನ್ನಿಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಭದ್ರತಾ ಪಡೆಗಳು ದೀಪಾವಳಿ ಹಬ್ಬದ ಸಲುವಾಗಿ ಜಮ್ಮು ಮತ್ತು ಕಾಶ್ಮೀರದುದ್ದಕ್ಕೂ ಕಟ್ಟೆಚ್ಚರ ವಹಿಸಿವೆ.
ಜಮ್ಮು ಕಾಶ್ಮೀರ ವಿಧಾನ ಸಭೆ ಚುನಾವಣೆಯ ಬಳಿಕ ಉಗ್ರರ ದಾಳಿ ಜೋರಾಗಿದ್ದು ನಾಗರಿಕರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಕಳೆದ ವಾರದಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ, ವಿಶೇಷವಾಗಿ ಕಣಿವೆ ಪ್ರದೇಶದಲ್ಲಿ ನಡೆದ ಅನೇಕ ಗುಂಡಿನ ಚಕಮಕಿಗಳಲ್ಲಿಇಬ್ಬರು ಸೈನಿಕರು ಹಾಗೂ ನಾಗರಿಕರು ಸೇರಿ 12 ಜನ ಮೃತ ಪಟ್ಟಿದ್ದರು.
ಅಕ್ಟೋಬರ್ 24 ರಂದು, ಬಾರಾಮುಲ್ಲಾದ ಗುಲ್ಮಾರ್ಗ್ ಬಳಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ನಡೆಸಿದ್ದರು. ಘಟನೆಯಲ್ಲಿ ಎರಡು ಸೈನಿಕರು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಈ ಘಟನೆಗೂ ಮೊದಲು ತ್ರಾಲ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಉತ್ತರಪ್ರದೇಶ ಮೂಲದ ಕಾರ್ಮಿಕ ಗಾಯಗೊಂಡಿದ್ದ. ಅಕ್ಟೋಬರ್ 20 ರಂದು ಗಂಡರ್ಬಾಲ್ ಜಿಲ್ಲೆಯ ಸೋನಾಮಾರ್ಗ್ನ ಸುರಂಗ ಮಾರ್ಗ ನಿರ್ಮಾಣ ಸ್ಥಳದ ಬಳಿ ವಾಸವಿದ್ದ 6 ವಲಸೆ ಕಾರ್ಮಿಕರು ಹಾಗೂ ವೈದ್ಯ ಸೇರಿದಂತೆ 7 ಜನರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಗೆ ಎರಡು ದಿನಗಳ ಮೊದಲು ಬಿಹಾರದ ಮತ್ತೊಬ್ಬ ವಲಸೆ ಕಾರ್ಮಿಕನ ಮೇಲೆ ದಾಳಿ ನಡೆಸಲಾಗಿತ್ತು. ಅಖ್ನೂರ್ ಸೆಕ್ಟರ್ ಪ್ರದೇಶವು ಉಗ್ರರ ದಾಳಿಗೆ ಕುಖ್ಯಾತವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಪ್ರದೇಶಗಳಲ್ಲಿ ಹರಿದು ಹೋಗುವ ಮನಾವರ್ ತಾವಿ ನದಿ ಮೂಲಕ ಉಗ್ರರು ಭಾರತದ ಗಡಿಯೊಳಗೆ ನುಸುಳಿ ಭದ್ರತಾ ಪಡೆಗಳ ಮೇಲೆ ದಾಳಿ ಎಸಗಿದ ಹಲವು ಘಟನೆಗಳು ಹಿಂದೆ ನಡೆದಿದ್ದಿದೆ.