Friday, 22nd November 2024

ಉಗ್ರ ಚಟುವಟಿಕೆಗಳಿಗೆ ’ಫಂಡಿಂಗ್’: ದೇಶದ ವಿವಿಧೆಡೆ ಎನ್‌ಐಎ ದಾಳಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದೇಶದ ವಿವಿಧೆಡೆ ನಡೆಸುತ್ತಿರುವ ದಾಳಿಗಳು ಗುರುವಾರ ಕೂಡ ಮುಂದುವರೆದಿದೆ.

ರಾಷ್ಟ್ರ ರಾಜಧಾನಿ ಹಾಗೂ ಶ್ರೀನಗರದಲ್ಲಿರುವ ಕೆಲ ಎನ್’ಜಿಒ, ಟ್ರಸ್ಟ್’ಗಳು ಹಾಗೂ ಸಾಮಾಜಿಕ ಹೋರಾಟಗಾರರ ಕಚೇರಿಗಳ ಮೇಲೆ ಎನ್‌ಐಎ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ದೆಹಲಿ ಹಾಗೂ ಶ್ರೀನಗರದಲ್ಲಿರುವ 6 ಎನ್’ಜಿಒ ಮತ್ತು ಟ್ರಸ್ಟ್ ಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ. ಫಲಾ-ಇ-ಆಮ್ ಟ್ರಸ್ಟ್, ಚಾರಿಟಿ ಅಲೈಯನ್ಸ್, ಹ್ಯೂಮನ್ ವೆಲ್ಫೇರ್ ಫೌಂಡೇಶನ್, ಜೆಕೆ ಯತೀಮ್ ಫೌಂಡೇಶನ್, ಸಾಲ್ವೇಶನ್ ಮೂವ್ಮೆಂಟ್ ಮತ್ತು ಜೆ & ಕೆ ವಾಯ್ಸ್ ಆಫ್ ವಿಕ್ಟಿಮ್ಸ್ (ಜೆಕೆವಿ ಒವಿ) ಎಂಬ ಟ್ರಸ್ಟ್ ಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಎನ್‌ಐಎ ಬೆಂಗಳೂರು ಒಂದು ಮತ್ತು ಶ್ರೀನಗರ, ಬಂಡಿಪೋರಾದಲ್ಲಿ 10 ಪ್ರದೇಶಗಳ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆ ಗಳನ್ನು ವಶಕ್ಕೆ ಪಡೆದುಕೊಂಡಿತ್ತು.