ಗ್ಯಾಂಗ್ಸ್ಟರ್ಗಳು ಮತ್ತು ಉಗ್ರಸಂಘಟನೆಗಳು ಪರಸ್ಪರ ಸಹಕಾರದಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದಾರೆ ಎಂಬ ವಿಚಾರದ ತನಿಖೆಯನ್ನು ದೆಹಲಿ ಪೊಲೀಸರು ಆಗಸ್ಟ್ 26ರಿಂದ ಶುರು ಮಾಡಿದ್ದರು. ಅದನ್ನು ಬಳಿಕ ಎನ್ಐಎಗೆ ವರ್ಗಾಯಿಸಲಾಗಿದೆ. ಎನ್ಐಎ ಈಗಾಗಲೇ ಮೂರ್ನಾಲ್ಕು ಸುತ್ತಿನಲ್ಲಿ ವಿವಿಧ ರಾಜ್ಯಗಳಲ್ಲಿ ರೇಡ್ ಮಾಡಿದೆ.
ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳೂ ಕೂಡ ಸಶಸ್ತ್ರಪಡೆಗಳು, ಸ್ಫೋಟಕಗಳು, ಐಇಡಿಗಳನ್ನು ಅಂತಾರಾಷ್ಟ್ರೀಯ ಗಡಿಯಲ್ಲಿ ಕಳ್ಳಸಾಗಣೆ ಮಾಡುತ್ತಿವೆ ಎಂದು ಹೇಳಲಾಗಿದೆ.
ಇನ್ನು ಎನ್ಐಎ ರೇಡ್ ವೇಳೆ, ಹಲವು ಡಿಜಿಟಲ್ ಉಪಕರಣಗಳನ್ನು, ವಿವಿಧ ಮಹತ್ವದ ಅಂಶಗಳುಳ್ಳ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
Read E-Paper click here