Wednesday, 18th December 2024

Terrorist Basha: ಉಗ್ರನಿಗೆ ಹುತಾತ್ಮ ಪಟ್ಟ? ಸೀರಿಯಲ್‌ ಬಾಸ್ಟ್‌ ಮಾಸ್ಟರ್‌ ಮೈಂಡ್‌ ಬಾಷಾ ಅಂತ್ಯಕ್ರಿಯೆಗೆ 1,500 ಪೊಲೀಸರ ನಿಯೋಜನೆ

basha

ಕೊಯಮತ್ತೂರು: ಕೊಯಮತ್ತೂರಿನಲ್ಲಿ ನಡೆದ 1998ರ ಸರಣಿ ಬಾಂಬ್ ಸ್ಫೋಟ(Serial Bomb Blast)ದ ಮಾಸ್ಟರ್ ಮೈಂಡ್ ಎಸ್ ಎ ಬಾಷಾ(A S Basha) ಮೃತಪಟ್ಟಿದ್ದು, ತಮಿಳುನಾಡಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿರುವ ವಿಡಿಯೋ ವೈರಲ್ ಆಗುತ್ತಿದೆ. ಬಾಷಾನ ಮೃತದೇಹವನ್ನು ಭಾರೀ ಪೊಲೀಸ್ ಭದ್ರತೆಯ ನಡುವೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಮಂಗಳವಾರ ಸಂಜೆ ಅಂತ್ಯಕ್ರಿಯೆ(Terrorist Basha) ನಡೆಸಲಾಯಿತು.

ಬಾಷಾ (84) ಅವರು ವಯೋಸಹಜ ಕಾಯಿಲೆಗಳಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಡಿಸೆಂಬರ್ 16 ರಂದು ಸಂಜೆ ನಿಧನನಾಗಿದ್ದ. ಆತನ ಅಂತ್ಯಕ್ರಿಯೆಯಲ್ಲಿ ಕೆಲವು ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಬಾಷಾ ಕುಟುಂಬಸ್ಥರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಯಾವುದೇ ಅಹಿತರಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಕನಿಷ್ಠ 1,500 ಪೊಲೀಸರನ್ನು ನಿಯೋಜಿಸಲಾಗಿತ್ತು.

ದಕ್ಷಿಣ ಉಕ್ಕಡಂನಲ್ಲಿರುವ ಅವರ ರೋಸ್ ಗಾರ್ಡನ್ ನಿವಾಸದಿಂದ ಅಂತ್ಯಕ್ರಿಯೆಯ ಮೆರವಣಿಗೆ ಪ್ರಾರಂಭವಾಗಿ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಹೂವಿನ ಮಾರುಕಟ್ಟೆಯಲ್ಲಿರುವ ಹೈದರ್ ಅಲಿ ಟಿಪ್ಪು ಸುಲ್ತಾನ್ ಸುನ್ನತ್ ಜಮಾತ್ ಮಸೀದಿಗೆ ಕೊಂಡೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಯಾರು ಈ ಬಾಷಾ?

ಅಲ್-ಉಮ್ಮಾದ ಬಾಷಾ ಮತ್ತು ಇತರ 16 ಮಂದಿ 1998ರ ಸ್ಫೋಟಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಇತ್ತೀಚೆಗಷ್ಟೇ ಈತನಿಗೆ ಅನಾರೋಗ್ಯದ ಹಿನ್ನೆಲೆ ಮದ್ರಾಸ್ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿತ್ತು. ಬಾಷಾ ನಿಷೇಧಿತ ಸಂಘಟನೆ ಅಲ್-ಉಮ್ಮಾದ ಸಂಸ್ಥಾಪಕ-ಅಧ್ಯಕ್ಷರಾಗಿದ್ದು, ಫೆಬ್ರವರಿ 14 ರಂದು 58 ಜೀವಗಳನ್ನು ಬಲಿತೆಗೆದುಕೊಂಡ ಸರಣಿ ಬಾಂಬ್ ಸ್ಫೋಟದ ಹಿಂದೆ ಈತನ ಕೈವಾಡ ಇತ್ತು. ಯೋಜಿಸಿದ್ದರು. ಸ್ಫೋಟಗಳಲ್ಲಿ 231 ಜನರು ಗಾಯಗೊಂಡಿದ್ದರು.

ಮೇ 1999 ರಲ್ಲಿ, ಕ್ರೈಂ ಬ್ರಾಂಚ್ CID ಯ ವಿಶೇಷ ತನಿಖಾ ತಂಡವು ಬಾಷಾ ವಿರುದ್ಧ ಚಾರ್ಜ್‌ಶೀಟ್ ಅನ್ನು ಸಲ್ಲಿಸಿತು, ಆತ್ಮಹತ್ಯಾ ದಳವನ್ನು ಬಳಸಿಕೊಂಡು ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಆರೋಪಿಸಿದ್ದರು.

ಅಂತ್ಯಕ್ರಿಯೆಯ ವೈರಲ್ ವಿಡಿಯೋಗಳಿಗೆ ಬಿಜೆಪಿ ಪ್ರತಿಕ್ರಿಯೆ

ಬಾಷಾನನ್ನು ಹುತಾತ್ಮ ಎಂದು ಬಿಂಬಿಸಿರುವುದನ್ನು ಖಂಡಿಸಿರುವ ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ ಅಣ್ಣಾಮಲೈ, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡುವ ಬದಲು ಅವರ ಕುಟುಂಬ ಸದಸ್ಯರಿಗೆ ಮಾತ್ರ ಅವಕಾಶ ನೀಡಬೇಕಿತ್ತು. ಈ ಕೃತ್ಯವು ಕೊಯಮತ್ತೂರಿನಲ್ಲಿ ಶಾಂತಿ ಕದಡುತ್ತದೆ ಮತ್ತು ಕೋಮು ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಎಂದು ಅಣ್ಣಾಮಲೈ ಕಿಡಿ ಕಾರಿದರು.

ಬಾಷಾ ಅವರನ್ನು ಹುತಾತ್ಮರೆಂದು ಬಿಂಬಿಸಿರುವುದನ್ನು ವಿರೋಧಿಸಿ ಬಿಜೆಪಿಯ ಕೊಯಮತ್ತೂರು ಘಟಕವು ಡಿಸೆಂಬರ್ 20 ರಂದು ಕರಾಳ ದಿನ ಆಚರಿಸಲಿದೆ ಎಂದು ಅವರು ಘೋಷಿಸಿದರು.

ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರ ಅಪಹರಣ-ಹತ್ಯೆ ಪ್ರಕರಣ; ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಯಲಾಯ್ತು ಕುಕಿ ಉಗ್ರರ ಅಟ್ಟಹಾಸ