ಆರೋಪಿಗಳು ಅಂಗಡಿ ಉದ್ಯೋಗಿಯನ್ನು ಕೊಂದು, ಶವವನ್ನು ಟ್ರಾಲಿ ಬ್ಯಾಗ್ ನಲ್ಲಿ ಇರಿಸಿ ದಕ್ಷಿಣ ದೆಹಲಿಯ ಮಾರುಕಟ್ಟೆಯ ಸಮೀಪವಿರುವ ಸರೋಜಿನಿ ನಗರದ ಮೆಟ್ರೋ ನಿಲ್ದಾಣದ ಹೊರಗೆ ಇಟ್ಟಿದ್ದರು. ಉದ್ಯೋಗಿ ಉದ್ಯಮಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಲೆಯಾದ ಉದ್ಯೋಗಿ ವೀಡಿಯೊವನ್ನು ರೆಕಾರ್ಡ್ ಮಾಡಿ ವ್ಯಾಪಾರಿಯಿಂದ ಹಣವನ್ನು ಸುಲಿಗೆ ಮಾಡಲು ಬಳಸಿದ್ದಾರೆ. ಹಣ ನೀಡದಿದ್ದರೆ ಸಾಮಾ ಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ಯೋಜನೆ ರೂಪಿಸಿದ್ದ ಉದ್ಯಮಿ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ವಾಸಿಸುವ ತನ್ನ ಸೋದರಳಿಯನನ್ನು ದೆಹಲಿಗೆ ಕರೆಸಿಕೊಂಡಿದ್ದ.
ಈ ವ್ಯಕ್ತಿಗಳು ದೊಡ್ಡ ಟ್ರಾಲಿ ಬ್ಯಾಗ್ ಅನ್ನು ಹೊತ್ತೊಯ್ಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೋ ಕೆಲಸಕ್ಕಾಗಿ ಉದ್ಯೋಗಿಯನ್ನು ಅತಿಥಿಗೃಹಕ್ಕೆ ಕರೆದ ಅವರು ಅತಿಥಿಗೃಹದ ಬಟ್ಟೆ ಒಣಗಿಸುವ ಹಗ್ಗದಿಂದ ಅವನನ್ನು ಕಟ್ಟಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.