ಮುಂಬೈ: ಮೂರು ವರ್ಷದ ಬಾಲಕಿಯನ್ನು ಕೊಂದು ಆಕೆಯ ಶವವನ್ನು ಯಾರಿಗೂ ಕಾಣದಂತೆ ಸುಟ್ಟು ಸಾಕ್ಷಿ ನಾಶ ಮಾಡಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದ (Maharashtra) ಥಾಣೆಯ (Thane) ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. (Thane Horror) ನವೆಂಬರ್ 18 ರಂದು ಥಾಣೆಯ ಉಲ್ಲಾಸನಗರದ ಪ್ರೇಮ್ ನಗರದಲ್ಲಿರುವ ತನ್ನ ಮನೆಯ ಸಮೀಪದಿಂದ ಕಾಣೆಯಾಗಿದ್ದ ಬಾಲಕಿ ಗುರುವಾರ ಶವವಾಗಿ ಪತ್ತೆಯಾಗಿದ್ದಳು.
ನಂತರ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ವಿಚಾರಣೆಯಲ್ಲಿ ಆರೋಪಿ ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾನೆ. ಮೃತ ಬಾಲಕಿ ತನ್ನ ಅಣ್ಣನ ಮಗಳಾಗಿದ್ದು, ಅವಳ ಜತೆ ಆಟವಾಡುತ್ತಿದೆ. ತಮಾಷೆಗೆ ಕಪಾಳಕ್ಕೆ ಹೊಡೆಯುವ ಆಟ ಆಡುತ್ತಿದ್ದಾಗ, ಆಕೆ ಅಡುಗೆ ಮನೆಯ ಕಟ್ಟೆಗೆ ಬಡಿದು ಮೃತ ಪಟ್ಟಿದ್ದಳು. ಆದರೆ ತಾನು ಉದ್ದೇಶಪೂರ್ವಕವಾಗಿ ಈ ಕೊಲೆ ಮಾಡಿಲ್ಲ ಎಂದು ಆರೋಪಿ ಹೇಳಿದ್ದಾನೆ. ಕೊಲೆ ಮಾಡಿದ ನಂತರ ಬಾಲಕಿ ಸತ್ತಿರುವ ವಿಷಯ ಯಾರಿಗೂ ತಿಳಿಯಬಾರದು ಎಂದು ಶವವನ್ನು ಸುಟ್ಟು ಸಾಕ್ಷಿನಾಶಕ್ಕೆ ಯತ್ನಿಸಿದ್ದ. ಅರೆಬರೆ ಸುಟ್ಟ ಬಾಲಕಿಯ ಮೃತದೇಹ ಪ್ರೇಮನಗರ ಸಮೀಪದ ಪೊದೆಯಲ್ಲಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ, ಮಸೀದಿಯೊಳಗೆ 5 ವರ್ಷಗಳ ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರವೆಸಗಿರುವ ಘಟನೆ ಇತ್ತೀಚೆಗೆ ರಾಜಸ್ಥಾನದ ಅಲ್ವಾರ್ನಲ್ಲಿ ನಡೆದಿದೆ. ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಮೌಲ್ವಿ ಅಸ್ಜದ್ ಮಸೀದಿಯೊಳಗೆ ಬಾ ಎಂದು ಬಾಲಕಿಯನ್ನು ಕರೆದಿದ್ದಾನೆ. ಮಸೀದಿಯೊಳಗೆ ಹೋಗುತ್ತಿದ್ದಂತೆ ಮಸೀದಿಯ ಒಳ ಕೋಣೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಬಾಲಕಿ ಮನೆಯಲ್ಲಿ ಎಲ್ಲೂ ಕಾಣದ ಕಾರಣ ಆಕೆಯ ತಾಯಿ ಮನೆ ಹೊರಗಡೆ ಹುಡುಕಿದ್ದಾಳೆ. ಆದರೆ ಬಾಲಕಿಯ ಪತ್ತೆ ಸಿಕ್ಕಿರಲಿಲ್ಲ. ನಂತರ ಮಸೀದಿ ಬಳಿ ಹೋಗಿದ್ದಳು. ಆಗ ಆಕೆಯ ಮಗಳು ಅಳುತ್ತಿರುವ ಶಬ್ದ ಕೇಳಿ ಮಸೀದಿ ಒಳಗೆ ಹೋಗಿದ್ದಾಳೆ. ನಂತರ ಮೌಲ್ವಿ ಅತ್ಯಾಚಾರ ನಡೆಸಿರುವುದಾಗಿ ತಿಳಿದು ಬಂದಿದೆ. ಸದ್ಯ ಆರೋಪಿ ಮೌಲ್ವಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : Viral Video: ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿ ಸೊಳ್ಳೆ ನಿವಾರಕ ಸೇವಿಸಿ ಆತ್ಮಹತ್ಯೆಗೆ ಯತ್ನ! ಯುವಕನ ಪ್ರಾಣ ಕಾಪಾಡಿದ ಪೊಲೀಸರು
ಯುವತಿಯೊಬ್ಬಳು ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಮೃತಪಟ್ಟ ಘಟನೆ ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು ನಾಸಿಕ್ನ ಅನುಷ್ಕಾ ಅಠಾವಳೆ ಎಂದು ಗುರುತಿಸಲಾಗಿದೆ. ಆಕೆಯ ಸಾವಿಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.