Friday, 24th May 2024

ಕರ್ನಾಟಕದ 19 ನೇ ರಾಜ್ಯಪಾಲರಾಗಿ ತಾವರ್ ಸಿಂಗ್ ಗೆಹ್ಲೋಟ್ ನೇಮಕ

ನವದೆಹಲಿ : ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಸಿಂಗ್ ಗೆಹ್ಲೋಟ್ ನೇಮಕಗೊಂಡಿದ್ದಾರೆ. ವಜುಭಾಯಿ ವಾಲಾ ಬಳಿಕ ಕರ್ನಾಟಕದ 19 ನೇ ರಾಜ್ಯಪಾಲರಾಗಿ ಗೆಹ್ಲೋಟ್ ನೇಮಕಗೊಂಡಿದ್ದಾರೆ.

ಮಧ್ಯಪ್ರದೇಶ ರಾಜ್ಯವನ್ನು ಪ್ರತಿನಿಧಿಸುವ ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅವರು ಈ ಹಿಂದೆ 1996 ರಿಂದ 2009 ರವರೆಗೆ ಭಾರತದ ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ ಶಾಜಾಪುರವನ್ನು ಪ್ರತಿನಿಧಿಸಿದ್ದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯ ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ವಜುಭಾಯಿ ವಾಲಾ ಅವರ ಅವಧಿ ಮುಗಿದಿದ್ದರೂ ಮುಂದುವರೆಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಕರ್ನಾಟಕದ 19 ನೇ ರಾಜ್ಯಪಾಲ ರಾಗಿ ನೇಮಕ ಮಾಡಲಾಗಿದೆ. ಅಂತೆಯೇ, ಇತರ ಪ್ರಮುಖ ರಾಜ್ಯಗಳ ರಾಜ್ಯಪಾಲರುಗಳು ವರ್ಗಾವಣೆ ಮಾಡಿ ಆದೇಶ ಹೊರಡಿಸ ಲಾಗಿದೆ.

ಮಿಜೋರಾಂ ರಾಜ್ಯದ ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಅವರನ್ನು ಗೋವಾ ರಾಜ್ಯದ ರಾಜ್ಯಪಾಲರಾಗಿ, ಹರ‍್ಯಾಣ ರಾಜ್ಯಪಾಲ ಸತ್ಯದೇವ್‌ ನಾರಾಯಣ್ ಆರ‍್ಯ ಅವರನ್ನು ತ್ರಿಪುರಾ ರಾಜ್ಯದ ರಾಜ್ಯಪಾಲರಾಗಿ, ಅಂತೆಯೇ, ತ್ರಿಪುರಾದ ರಾಜ್ಯಪಾಲ ರಮೇಶ್‌ ಬಾಯಸ್‌ ಅವರನ್ನು ಜಾರ್ಖಂಡ್‌ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಬಂಡಾರು ದತ್ತಾತ್ರೇಯ ಅವರನ್ನು ಹರ‍್ಯಾಣ ರಾಜ್ಯದ ರಾಜ್ಯಪಾಲರನ್ನಾಗಿ, ಮಿಜೋರಾಂ ರಾಜ್ಯದ ರಾಜ್ಯಪಾಲರನ್ನಾಗಿ ಡಾ.ಹರಿಬಾಬು ಕಂಬಂಪತಿ, ಮಧ್ಯಪ್ರದೇಶ ರಾಜ್ಯದ ರಾಜ್ಯಪಾಲರಾಗಿ ಮಂಗೂಭಾಯಿ ಛಗನ್‌ಭಾಯಿ ಪಟೇಲ್‌ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್‌ ಅರ್ಲೇಕರ್‌ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!