Thursday, 7th December 2023

ಬಿಜೆಪಿಗೆ ಮಾಜಿ ಕುಸ್ತಿಪಟು ದಿ ಗ್ರೇಟ್ ಖಲಿ ಸೇರ್ಪಡೆ

ನವದೆಹಲಿ : ಗುರುವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿರುವ ಮೂಲಕ ಮಾಜಿ ಕುಸ್ತಿಪಟು ದಿ ಗ್ರೇಟ್ ಖಲಿ ತಮ್ಮ ರಾಜಕೀಯ ಇನ್ನಿಂಗ್ಸ್ ಪ್ರಾರಂಭಿಸಿ ದರು. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪಕ್ಷದ ಖಲಿ ಅವರನ್ನ ಸ್ವಾಗತಿಸಿದ್ದಾರೆ.

ಹಿಮಾಚಲ ಪ್ರದೇಶ ಮೂಲದ ಗ್ರೇಟ್ ಖಲಿ, ಪ್ರಧಾನಿ ಮೋದಿ ಅವರನ್ನ ಶ್ಲಾಘಿಸಿ, ಮೋದಿ ರೂಪದಲ್ಲಿ ದೇಶಕ್ಕೆ ಸರಿಯಾದ ಪ್ರಧಾನಿ ಸಿಕ್ಕಿದ್ದಾರೆ ಎಂದರು.

ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಕೆಲಸವನ್ನ ನಾನು ಮೆಚ್ಚುತ್ತೇನೆ. ಪಕ್ಷದ ಸಿದ್ಧಾಂತವು ಭಾರತದ ಪ್ರಗತಿಯ ಗುರಿಯನ್ನ ಹೊಂದಿದೆ ಮತ್ತು ನಾನು ಬಿಜೆಪಿಯ ಮಾನದಂಡಗಳಿಗೆ ಅನುಗುಣವಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ’ ಎಂದು ಹೇಳಿದರು.

error: Content is protected !!