Thursday, 12th December 2024

ಪ್ರಧಾನಿ ಮೋದಿಯವರ ʼದಿ ಮೋದಿ ಸ್ಟೋರಿʼ ವೆಬ್‌ಸೈಟ್ ಉದ್ಘಾಟನೆ

ನವದೆಹಲಿ: ಮಹಾತ್ಮಾ ಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವನದ ಕಥೆಗಳ ಸಂಗ್ರಹ ʼದಿ ಮೋದಿ ಸ್ಟೋರಿʼ ಎಂಬ ವೆಬ್‌ಸೈಟ್ ಅನ್ನು ಶನಿವಾರ ಉದ್ಘಾಟಿಸಿದರು.

ಮೋದಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಜನರು ಮೋದಿಯವರ ಕಾರ್ಯಗಳ ಬಗ್ಗೆ ಮೆಲುಕು ಹಾಕಿದ ನೆನಪುಗಳನ್ನು ಈ ವೆಬ್’ಸೈಟ್ ಒಳಗೊಂಡಿರಲಿದೆ.

ಸಮಾರಂಭದಲ್ಲಿ ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರೂ ಭಾಗಿ ಯಾಗಿದ್ದು, ವೆಬ್ ಸೈಟ್ ಕುರಿತು ಮಾತನಾಡಿ, ನರೇಂದ್ರ ಮೋದಿಯವರೊಂದಿಗಿನ ಸಂವಾದದ ವೇಳೆ ಅವರ ಸರಳತೆಗೆ ಮೈಮರೆತಿದ್ದೆ, ನಾನು ದೇಶದ ಪ್ರಧಾನಿ ಯೊಂದಿಗೆ ಇದ್ದೇನೆ ಎಂದು ನನಗೆ ಅನಿಸಲಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಜೀವನ ಪಯಣ ಮತ್ತು ಸಾರ್ವಜನಿಕ ಜೀವನದಲ್ಲಿ ಅವರು ಮಾಡಿದ ಆಸಕ್ತಿದಾಯಕ ಕಾರ್ಯಗಳು ಮತ್ತು ಅವರ ಜೀವನದಲ್ಲಿ ನಡೆದಿರುವ ಸ್ವಾರಸ್ಯಕರ ಘಟನೆಗಳನ್ನು ತಿಳಿದುಕೊಳ್ಳಲು ವೆಬ್‌ಸೈಟ್ ಅನ್ನು (Modistory.in) ವೀಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.