Theft Case: 60 ರೂ ನಗದನ್ನು ಕಳ್ಳತನ ಮಾಡಿದ ಆರೋಪಿಯನ್ನು 27 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಹೌದು, 1997ರಲ್ಲಿ ನಡೆದ ಹಣ ಕಳ್ಳತನ (Amount theft case) ಪ್ರಕರಣದ ಆರೋಪಿಯನ್ನು 2024ರಲ್ಲಿ ಬಂಧಿಸಲಾಗಿದೆ.
ಆರೋಪಿ(accuse)ಯನ್ನು ಬಂಧಿಸಲು ಇಷ್ಟು ವರ್ಷ ಬೇಕಾ ಎಂಬ ಪ್ರಶ್ನೆಯ ಜೊತೆಯಲ್ಲೇ ಕಾನೂನಿನ ಕೈಗಳಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನೂ ಸಾಬೀತುಪಡಿಸಿದಂತಾಗಿದೆ. ಈತ ಕಳೆದ 27 ವರ್ಷಗಳಿಂದ ಪೊಲೀಸರ ಕೈಗೂ ಸಿಗದೇ, ಖಾಕಿ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಈ ಆರೋಪಿಯ ಹೆಸರು ಲಾಂಗ್ ಪೆಂಡಿಂಗ್ ರಿಪೋರ್ಟ್‌ಗೆ (Long Pending Report) ಸೇರಿಸಲಾಗಿತ್ತು.
ಬಂಧಿತ ಆರೋಪಿಯನ್ನು ಪನ್ನೀರ್ ಸೆಲ್ವಂ ಎಂದು ಗುರುತಿಸಲಾಗಿದ್ದು, ಶಿವಕಾಶಿ(Sivakasi)ಯಲ್ಲಿ ಸಿಕ್ಕಿಬಿದ್ದಿರುವುದಾಗಿ ವರದಿಯಾಗಿದೆ. ಅಂದು ಕೇವಲ 60 ರೂ ಕದ್ದ ಪ್ರಕರಣವಾದ ಕಾರಣ ಪೊಲೀಸರು(police) ಈ ಕೇಸ್ ಅನ್ನು ಮತ್ತೆ ತನಿಖೆ ಮಾಡುವ ಪ್ರಯತ್ನ ಮಾಡಲಿಲ್ಲ. ಆದರೂ ದೂರು ದಾಖಲಾಗಿದ್ದ ಕಾರಣ ಕಾನೂನು ಪ್ರಕ್ರಿಯೆ ಮುಗಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಾಹಿತಿ ಪಡೆದುಕೊಂಡು ಒಂದಷ್ಟು ದಿನ ತನಿಖೆ ನಡೆಸಿದ್ದರು. ಆದರೆ 60 ರೂಪಾಯಿ ಎಗರಿಸಿದ ಪನ್ನಿರ್ ಸೆಲ್ವಂ ನಾಪತ್ತೆಯಾಗಿದ್ದ.
ಅಂದರ್ ಆಗಿದ್ದು ಹೇಗೆ..?
ಬಹುಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಹಾಯಕ ಆಯುಕ್ತ ಸೂರಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣ ಭೇದಿಸಲೆಂದೇ ವಿಶೇಷ ಸಬ್ ಇನ್ಸ್‌ಪೆಕ್ಟರ್‌ಗಳಾದ ಸಂತಾನಪಾಂಡಿಯನ್ ನೇತೃತ್ವದ ತಂಡ ನಿಯೋಜಿಸಿದ್ದು, ತಲೆಮರೆಸಿಕೊಂಡಿರುವ ಶಂಕಿತರಿಗಾಗಿ ಬಲೆ ಬೀಸಿತ್ತು. ಆ ಪೈಕಿ ಕಳ್ಳತನ ಪ್ರಕರಣಗಳಲ್ಲಿ ಒಂದಾದ ತೆಪ್ಪಕುಳಂ ಪೊಲೀಸ್ ಠಾಣೆಯಲ್ಲಿ ದರೋಡೆ ನಡೆದಿದ್ದು, ಆರೋಪಿ ಪನ್ನೀರ್ ಸೆಲ್ವಂ ಸಂತ್ರಸ್ತೆಯಿಂದ 60 ರೂ.ಗಳನ್ನು ಕದ್ದು ತಲೆಮರೆಸಿಕೊಂಡಿದ್ದ ಪ್ರಕರಣವೂ ಮುನ್ನಲೆಗೆ ಬಂದಿತ್ತು.
ಆ ಪ್ರಕರಣವನ್ನು ಬೆನ್ನತ್ತಿ ತನಿಖಾಧಿಕಾರಿಗಳು ಜಕ್ಕತೊಪ್ಪಿಗೆ ಭೇಟಿ ನೀಡಿದಾಗ, ಪನ್ನೀರ್ ಸೆಲ್ವಂ ಶಿವಕಾಶಿಗೆ ತೆರಳಿರುವುದು ತಿಳಿದು ಬಂತು. ಆತ ತನ್ನ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು ಗಮನಿಸಿದ ಪೊಲೀಸರು, ಜನಸಂಖ್ಯಾ ಸಮೀಕ್ಷಕರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ತಂಡ, ಆತನ ಕುಟುಂಬದವರನ್ನು ಸಂಪರ್ಕಿಸಿ, ಸೆಲ್ವಂ ಗುರುತನ್ನು ದೃಢಪಡಿಸಿಕೊಂಡಿದೆ. ಆ ವ್ಯಕ್ತಿ ಈತನೇ ಎಂಬುದು ದೃಢವಾದ ಬೆನ್ನಲ್ಲೇ ಅಪರಾಧ ನಡೆದು 27 ವರ್ಷಗಳ ನಂತರ ಈಗ ಸೆಲ್ವಂನನ್ನು ಖಾಕಿ ಪಡೆ ಬಂಧಿಸಿದ್ದಾರೆ
28ರ ಹರೆಯಲ್ಲಿ 60 ರೂಪಾಯಿ ಎಗರಿಸಿ ನಾಪತ್ತೆಯಾದ ಪನೀರ್ ಸೆಲ್ವಂ 55 ವಯಸ್ಸಿನಲ್ಲಿ ಪೊಲೀಸ್ ಅಥಿತಿಯಾಗಿದ್ದಾನೆ. 27 ವರ್ಷಗಳ ಹಿಂದೆ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಶಿವಕಾಶಿಯ 55 ವರ್ಷದ ವ್ಯಕ್ತಿಯನ್ನು ಇದೀಗ ಮಧುರೈ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. 1997ರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಸೆಲ್ವಂ, 60 ರೂ. ಹಣವನ್ನು ಕಳ್ಳತನ ಮಾಡಿದ್ದು, ಸ್ಥಳದಿಂದ ಪರಾರಿಯಾಗಿದ್ದರು. ಈ ಕೇಸ್ ನಲ್ಲಿ ಪೊಲೀಸರ ಕಣ್ಣಪ್ಪಿಸಿ, ತಲೆಮರಿಸಿಕೊಂಡಿದ್ದ ಸೆಲ್ವಂನನ್ನು ಪೊಲೀಸರು ಶಿವಕಾಶಿಯಲ್ಲಿ ಅರೆಸ್ಟ್ ಮಾಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಪೊಲೀಸರ ಈ ಕಾರ್ಯಾಚಾರಣೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಕೋಟಿ ಲೂಟಿ ಹೊಡೆದು ರಾಜರೋಷವಾಗಿ ತಿರುಗುತ್ತಿರುವಾಗ 60 ರೂಪಾಯಿ ಕದ್ದವನನ್ನು ಬಂಧಿಸಿ ಏನು ಪ್ರಯೋಜನ ಎಂದು ಪ್ರಶಿಸಿದ್ದರೆ, ಸುದೀರ್ಘ ವರ್ಷಗಳ ಬಳಿಕ ಪೊಲೀಸರು ಆರೋಪಿ ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಶ್ರಮಿಸಿದರೆ ಎಷ್ಟೇ ವರ್ಷವಾದರೂ ಪ್ರಕರಣ ಭೇದಿಸಲು ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಕುಡಿದ ಮತ್ತಿನಲ್ಲಿದ್ದ ನಡುರಸ್ತೆಯಲ್ಲಿ ಪ್ಯಾಂಟ್ ಬಿಚ್ಚಿ ಕಾನ್ಸ್‌ಟೇಬಲ್ ಮಾಡಿದ್ದೇನು ಗೊತ್ತಾ? ಭಾರೀ ವೈರಲ್ ಆಗ್ತಿದೆ ಈ ವಿಡಿಯೊ