Sunday, 15th December 2024

ರೈತರು ಕೃಷಿ ಕಾಯಿದೆಗಳನ್ನು ವಿರೋಧಿಸಿಯೇ ಇರಲಿಲ್ಲ !

ದೇಶದ ಶೇ.೯೩ ರೈತರ ಬೆಂಬಲ: ವಿರೋಧಿಸಿದ್ದು ಕೇವಲ ೫ ಸಂಘಟನೆಗಳು

ಮಹತ್ವದ ಸಂಗತಿ ಬಹಿರಂಗಗೊಳಿಸಿದ ಸುಪ್ರೀಂ ಕೋರ್ಟ್ ತಜ್ಞರ ಸಮಿತಿ ಸದಸ್ಯ

ದೆಹಲಿ: ದೇಶಾದ್ಯಂತ ಗುಲ್ಲೆಬ್ಬಿಸಿ, ಕೊನೆಗೂ ಕೇಂದ್ರ ಸರಕಾರ ಹಿಂಪಡೆದ ಮೂರು ಪ್ರಮುಖ ಕೃಷಿ ಕಾಯಿದೆಗಳ ಪರವಾಗಿ
ದೇಶದ ಬಹುತೇಕ ರೈತರು ಇದ್ದರು. ಕೆಲವೇ ಕೆಲವು, ಬೆರಳೆಣಿಕೆಯ ರಾಜಕೀಯ ದುರುದ್ದೇಶದ ಸಂಘಟನೆಗಳಿಂದಾಗಿ ಕಾಯಿದೆ ಗಳನ್ನು ಹಿಂಪಡೆಯುವಂತಾಗಿದೆ.

ಸ್ವತಃ ಸುಪ್ರೀಂ ಕೋರ್ಟ್ ತಜ್ಞರ ಸಮಿತಿಯೇ, ಇಂಥ ಮಹತ್ವದ ಸಂಗತಿ ಬಹಿರಂಗಗೊಳಿ ಸಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾದ ವರದಿ ಯನ್ವಯ ದೇಶದ ಮೂರನೇಎರಡರಷ್ಟು ರೈತ ಸಂಘಟನೆಗಳು ಆ ಕೃಷಿ ಕಾನೂನುಗಳ ಪರವಾಗಿವೆ. ಕೆಲವು ರೈತ ಸಂಘಟನೆಗಳ ಒತ್ತಡದಿಂದಾಗಿ ಕೃಷಿ ಕಾನೂನುಗಳನ್ನು ಹಿಂಪಡೆಯಲಾಗಿರುವುದು ದುರಂತ. ಕೃಷಿ ಸುಧಾರಣೆಗಳ ಉದ್ದೇಶ ದಿಂದ ಕೇಂದ್ರ ಸರಕಾರ ಜಾರಿ ಗೊಳಿಸಲು ಮುಂದಾಗಿದ್ದ, ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಕೃಷಿ ಕಾಯಿದೆಗಳ ವಿರುದ್ಧ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಜ್ಞರ ಪರಿಶೀಲನಾ ಸಮಿತಿ ರಚಿಸಿತ್ತು.

ಮೂವರು ಸದಸ್ಯರ ತಜ್ಞರ ಸಮಿತಿ, ಕಳೆದ ವರ್ಷ ಮಾರ್ಚ್ ೧೯ರಂದೇ ಸುಪ್ರೀಂ ಕೋರ್ಟ್‌ಗೆ ತನ್ನ ವರದಿ ಸಲ್ಲಿಸಿತ್ತು. ಆದರೆ ಆ ವರದಿಯನ್ನು ಈವರೆಗೆ ಬಿಡುಗಡೆ ಮಾಡಲಾಗಿಲ್ಲ. ಇದೀಗ ಸಮಿತಿಯ ಸದಸ್ಯರಲ್ಲೊಬ್ಬರಾದ ಅನಿಲ್ ಘನವತ್ ಅವರೇ ವರದಿಯನ್ನು ಬಹಿರಂಗಗೊಳಿಸಿದ್ದಾರೆ.

ದೇಶದ ರೈತ ಸಂಘಟನೆಗಳ ಪೈಕಿ ಶೇ. ೮೭% ರೈತ ಸಂಘಟನೆಗಳು ಕೃಷಿ ಕಾಯಿದೆಗಳ ಪರವಾಗಿವೆ. ಮಾತ್ರವಲ್ಲ,ಕೆಲವು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಇತರ ಪ್ರಮುಖ ಏಳು ರೈತ ಸಂಸ್ಥೆಗಳು ಸಹ ಅದನ್ನು ಬೆಂಬಲಿಸಲು ಸಿದ್ಧವಾಗಿದ್ದವು. ಆದರೆ ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಮುಂದೆ ಕನಿಷ್ಠ ಹಾಜರಾಗಲೂ ಸಿದ್ಧವಿಲ್ಲದ ೪೦ ರೈತ ಸಂಘಟನೆಗಳ ಅನಗತ್ಯ ಒತ್ತಡಕ್ಕೊಳಗಾಗಿ ಪ್ರಧಾನಿ ಮೋದಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತಾಗಿದೆ.

ಇವುಗಳಲ್ಲಿ ಹೆಚ್ಚು ಆಂದೋಲನ ಸಂಘಟನೆಗಳು ಪಂಜಾಬ್ ಮೂಲದವು ಎನ್ನುತ್ತದೆ ವರದಿ. ಸಮಿತಿ ಸಲ್ಲಿಸಿದ ೯೮ ಪುಟಗಳ ವರದಿಯಲ್ಲಿ, ರೈತರನ್ನು ದಾರಿ ತಪ್ಪಿಸಿದ ರಾಜಕೀಯ ನಾಯಕರದ್ದೇ ಇದರಲ್ಲಿ ಬಹುಪಾಲು ಇದೆ. ಆದರೆ, ಕೃಷಿ ಕಾನೂನು ಗಳನ್ನು ಚರ್ಚಿಸಿದ ೭೩ ರೈತ ಸಂಘಟನೆಗಳಲ್ಲಿ ೩.೮೩ ಕೋಟಿಗೂ ಹೆಚ್ಚು ರೈತರಿzರೆ. ದೇಶದ ಶೇ. ೮೭ ರೈತ ಸಂಘಟನೆಗಳು
ಮೂರೂ ಕೃಷಿ ಕಾನೂನುಗಳ ಬೆಂಬಲಿತವಾಗಿವೆ ಎಂದು ಸುಪ್ರೀಂ ಕೋಟ್ ಗೆ ಹೇಳಲಾಗಿದೆ.

ಅಚ್ಚರಿ ಎಂದರೆ ದೆಹಲಿಯ ಗಡಿಯಲ್ಲಿ ಕುಳಿತಿದ್ದ ರೈತ ಸಂಘಟನೆಗಳಿಂದ ಪದೇ ಪದೇ ಜನಜೀವನ ಸ್ಥಗಿತಗೊಂಡಿದೆ. ಕೃಷಿ
ಕಾನೂನುಗಳನ್ನು ಹಿಂತೆಗೆದು ಕೊಳ್ಳುವುದು (ಈಗಾಗಲೇ ಹಿಂಪಡೆಯಲಾಗಿದೆ) ಅಥವಾ ದೀರ್ಘಕಾಲದವರೆಗೆ ಕೃಷಿ  ಕಾನೂನು ಗಳನ್ನು ಅಮಾನತುಗೊಳಿಸುವುದರಿಮದ ಕೃಷಿ ಕಾನೂನು ಗಳನ್ನು ಬೆಂಬಲಿಸಿದ ಬಹುಪಾಲು ರೈತರಿಗೆ ಅನ್ಯಾಯವಾಗುತ್ತದೆ ಎಂದು ವರದಿ ಹೇಳಿದೆ.

‘ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಹುಸಿ ಬೆದರಿಕೆ ಒಡ್ಡಿ ನಾಯಕರು, ಚಳವಳಿಗಾರರನ್ನು ದಾರಿ ತಪ್ಪಿಸಿದ್ದಾರೆ’ ಎಂದು ಸಮಿತಿ ಸ್ಪಷ್ಟವಾಗಿ ಹೇಳಿದೆ. ಕೃಷಿ ಅರ್ಥಶಾಸ್ತ್ರಜ್ಞರಾದ ಅಶೋಕ್ ಗುಲಾಟಿ ಮತ್ತು ಪಿಕೆ ಜೋಶಿ ಅವರು ಸಹ ಸಮಿತಿಯಲ್ಲಿದ್ದರು.

**

ಹಿಂಪಡೆಯುವುದನ್ನು ತಡೆಯಬಹುದಿತ್ತು

ಅನಿಲ್ ಘನವತ್ ಪ್ರಕಾರ, ‘ಒಂದೊಮ್ಮೆ ಸಮಿತಿಯ ವರದಿ ಬಂದ ಕೂಡಲೇ ಸುಪ್ರೀಂ ಕೋರ್ಟ್ ಅದನ್ನು ಬಿಡುಗಡೆ ಮಾಡಿದ್ದರೆ, ಕೃಷಿ ಕಾನೂನುಗಳ ಪ್ರಯೋಜನಗಳ ಬಗ್ಗೆ ಧರಣಿ ನಿರತ ರೈತರಲ್ಲಿ ಅರಿವು ಮೂಡಿಸಬಹುದಿತ್ತು. ಮಾತ್ರವಲ್ಲ, ದೇಶಕ್ಕೆ ಉಪಯುಕ್ತ ಕಾನೂನುಗಳನ್ನು ಹಿಂಪಡೆಯುವುದನ್ನೂ ತಡೆಯಬಹುದಿತ್ತು’.

***
ಸುಪ್ರೀಂ ಕೋರ್ಟ್‌ಗೆ ೩ಪತ್ರ ಬರೆದು ವರದಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆವು. ಆದರೆ, ನಮಗೆ ಯಾವುದೇ ಉತ್ತರ ಬರಲಿಲ್ಲ. ಕೃಷಿ ಕಾಯಿದೆಗಳನ್ನು ಈಗಾಗಲೇ ಹಿಂಪಡೆಯಲಾಗಿದ್ದು, ಈಗಾದರೂ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಕೋರಿದ್ದವು. ಅದಕ್ಕೂ ಯಾವುದೇ ಉತ್ತರವನ್ನು ಕೋರ್ಟ್ ನೀಡಿಲ್ಲ.
-ಅನಿಲ್ ಘನವತ್ ಸುಪ್ರೀಂ ಕೋರ್ಟ್ ತಜ್ಞರ ಸಮಿತಿ ಸದಸ್ಯ

ಯಾರು ಪರ ವಿರೋಧ?
೭೩  ಸಮಿತಿ ಚರ್ಚಿಸಿದ ಒಟ್ಟು ರೈತ ಸಂಘಟನೆಗಳು
೩.೮೩ ಸಮಿತಿ ಪರಿಗಣಿಸಿದ ಒಟ್ಟು ರೈತರ ಅಭಿಪ್ರಾಯ
೧೯,೦೨೭ ಸಮಿತಿ ಪರಿಗಣಿಸಿದ ರೈತರು/ಅಂಗ ಸಂಸ್ಥೆಗಳ ಸ್ವಯಂ ಅಭಿಪ್ರಾಯ
೮೩.೫%  ಸಂಪೂರ್ಣ ಕಾನೂನುಗಳ ಪರ

೬.೮% ಕೆಲ ಸಲಹೆಗಳೊಂದಿಗೆ ಕಾಯಿದೆಗೆ ಬೆಂಬಲ
೯.೫% ೫೧ ಲಕ್ಷ ರೈತರ (ಒಟ್ಟು ರೈತರ  ಶೇ.೪) ವಿರೋಧ