ಮೆಹಬೂಬ ನಗರದಲ್ಲಿ ರಾತ್ರಿ ಯಾತ್ರೆಗೆ ವಿರಾಮ ನೀಡಲಾಗುತ್ತದೆ. ಬೆಳಗ್ಗೆ 6-10ರ ಸುಮಾರಿನಲ್ಲಿ ಆರಂಭವಾದ ಯಾತ್ರೆಯಲ್ಲಿ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ.ವೇಣುಗೋಪಾಲ್, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಮತ್ತು ನೂರಾರು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು.
ಯಾತ್ರೆ ವೇಳೆ ರಸ್ತೆ ಬದಿಯಲ್ಲಿ ತನಗಾಗಿ ಕಾಯುತ್ತಿದ್ದ ಇಬ್ಬರು ಶಾಲಾ ವಿದ್ಯಾರ್ಥಿನಿ ಯರನ್ನು ಕರೆದ ರಾಹುಲ್ ಗಾಂಧಿ, ಅವರೊಂದಿಗೆ ಸ್ವಲ್ಪ ದೂರ ನಡೆದರು.
ಯಾತ್ರೆಯು ನವೆಂಬರ್ 7 ರಂದು ಮಹಾರಾಷ್ಟ್ರ ಪ್ರವೇಶಿಸುವ ಮೊದಲು ತೆಲಂಗಾಣದ 19 ವಿಧಾನಸಭಾ ಕ್ಷೇತ್ರ, 7 ಲೋಕಸಭಾ ಕ್ಷೇತ್ರ ಸೇರಿದಂತೆ ಒಟ್ಟಾರೇ 375 ಕಿ.ಮಿ.ನಷ್ಟು ದೂರ ಯಾತ್ರೆ ಸಾಗಲಿದೆ. ನವೆಂಬರ್ 4 ರಂದು ಒಂದು ದಿನದ ವಿರಾಮ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.