Wednesday, 23rd October 2024

ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿದ ಉದ್ಯೋಗಿಗೆ ಹೆಚ್ಚುವರಿ ಇನ್ಕ್ರಿಮೆಂಟ್‌

ಗ್ಯಾಂಗ್ಟಾಕ್ಸಿಕ್ಕಿಂ ಸರ್ಕಾರ ಜನಸಂಖ್ಯೆಯನ್ನು ಹೆಚ್ಚಿಸಲು ಹೊಸ ಯೋಜನೆಯೊಂದು ಪ್ರಕಟಿಸಿದೆ. ಸ್ಥಳೀಯ ಸಮುದಾಯ ಗಳ ಜನಸಂಖ್ಯೆಯನ್ನು ಹೆಚ್ಚಿಸಲು, ರಾಜ್ಯ ಸರ್ಕಾರವು ಈ ವರ್ಷದ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಎರಡು ಅಥವಾ ಮೂರು ಮಕ್ಕಳನ್ನು ಹೊಂದಿರುವ ತನ್ನ ಉದ್ಯೋಗಿಗಳಿಗೆ ಮುಂಗಡ ಮತ್ತು ಹೆಚ್ಚುವರಿ ಇನ್ಕ್ರಿಮೆಂಟ್‌ಗಳನ್ನು ನೀಡಲು ನಿರ್ಧರಿಸಿದೆ ಎಂದು ಅಧಿಸೂಚನೆಯೊಂದು ತಿಳಿಸಿದೆ.

ಸಿಬ್ಬಂದಿ ಇಲಾಖೆಯ ಕಾರ್ಯದರ್ಶಿ ರಿನ್ಜಿಂಗ್ ಚೆವಾಂಗ್ ಭುಟಿಯಾ ಅವರು ಸಿಕ್ಕಿಂ ಪ್ರಮಾಣಪತ್ರ / ಗುರುತಿನ ಪ್ರಮಾಣಪತ್ರ ವನ್ನು ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ಈ ಬಡ್ತಿ ನೀಡಲಿದೆ.

ಮೂವರು ಮಕ್ಕಳನ್ನು ಹೊಂದಿರುವ ನೌಕರರಿಗೆ ಹೆಚ್ಚುವರಿ ವೇತನ ಬಡ್ತಿ ಸಿಗಲಿದೆ ಎಂದು ಹೇಳಿದರು.

ಈ ಯೋಜನೆಯು ಜನವರಿ 1, 2023 ರಿಂದ ಜಾರಿಗೆ ಬರಲಿದೆ ಮತ್ತು ಜನವರಿ 1, 2023ರಂದು ಅಥವಾ ನಂತರ ಜನಿಸಿದ ಎರಡನೇ ಮತ್ತು ಮೂರನೇ ಮಗು ಮಾತ್ರ ಈ ಯೋಜನೆಗೆ ಅರ್ಹ ರಾಗಿರುತ್ತಾರೆ ಎಂದು ಭುಟಿಯಾ ಹೇಳಿದರು.

ದತ್ತು ಪಡೆದ ಸಂದರ್ಭದಲ್ಲಿ ಯೋಜನೆಯ ಪ್ರಯೋಜನಗಳು ಅನ್ವಯವಾಗುವುದಿಲ್ಲ ಎಂದು ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.

ಏಳು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸಿಕ್ಕಿಂ ಭಾರತದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ.