Saturday, 14th December 2024

ವಾರಾಣಸಿ ಲೋಕಸಭಾ ಕ್ಷೇತ್ರ: ಕಣಕ್ಕಿಳಿದ ಮೊದಲ ತೃತೀಯ ಲಿಂಗಿ

ನವದೆಹಲಿ:  ಬಾರಿ ಲೋಕಸಭಾ ಚುನಾವಣಾಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ದೇಶದ ಮೊದಲ ತೃತೀಯ ಲಿಂಗಿ ಹಿಮಾಂಗಿ ಸಖಿ ಅವರನ್ನು ಚುನಾವಣಾ ಕದನದಲ್ಲಿ ಕಣಕ್ಕಿಳಿಸಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಅವರಿಗೆ ಚುನಾವಣಾ ಟಿಕೆಟ್ ನೀಡಿದೆ. 5 ಭಾಷೆಗಳಲ್ಲಿ ಭಗವತ್ ಕಥಾವನ್ನು ಹೇಳುವ ಹಿಮಾಂಗಿ ಅವರು ಏ.10 ರೊಳಗೆ ವಾರಾಣಸಿಗೆ ಬರಲಿದ್ದಾರೆ.
ಅವರೇ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಿಷಿ ಕುಮಾರ್ ತ್ರಿವೇದಿ ಅವರು ಉತ್ತರ ಪ್ರದೇಶದ 20 ಲೋಕಸಭಾ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಇವುಗಳಲ್ಲಿ ಅತ್ಯಂತ ವಿಶೇಷವಾದದ್ದು ಮಹಾಮಂಡಲೇಶ್ವರ ಹಿಮಾಂಗಿ.