Thursday, 12th December 2024

ಶಂಕಿತ ಹೈಡ್ರಾಲಿಕ್ ವೈಫಲ್ಯ: ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ

ತಿರುವನಂತಪುರಂ: ಶಂಕಿತ ಹೈಡ್ರಾಲಿಕ್ ವೈಫಲ್ಯದಿಂದಾಗಿ ಕ್ಯಾಲಿಕಟ್‌ನಿಂದ ದಮ್ಮಾಮ್‌ಗೆ ತೆರಳುತ್ತಿದ್ದ ವಿಮಾನವನ್ನು ರಾಜ್ಯ ರಾಜಧಾನಿಗೆ ತಿರುಗಿಸಿದ ನಂತರ ಶುಕ್ರ ವಾರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸ ಲಾಗಿದೆ.
182 ಪ್ರಯಾಣಿಕರನ್ನು ಹೊತ್ತಿದ್ದ ಏರ್-ಇಂಡಿಯಾ ಎಕ್ಸ್‌ಪ್ರೆಸ್ IX 385 ನ ಹಿಂದಿನ ಭಾಗವು ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆಗುವ ಸಮಯದಲ್ಲಿ ರನ್‌ವೇಗೆ ಅಪ್ಪಳಿಸಿತು ಎಂದು ಮೂಲಗಳು ತಿಳಿಸಿವೆ.
ಸುರಕ್ಷಿತ ಲ್ಯಾಂಡಿಂಗ್‌ಗೆ ಅನುಕೂಲವಾಗುವಂತೆ ಅರಬ್ಬಿ ಸಮುದ್ರದ ಮೇಲೆ ಇಂಧನವನ್ನು ಸುರಿದ ನಂತರ ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಮೂಲಗಳುತಿಳಿಸಿವೆ.