Saturday, 14th December 2024

ವೃದ್ದನ ಹತ್ಯೆ ಪ್ರಕರಣ: ಮೂವರು ಸ್ಥಳೀಯ ಬಿಜೆಪಿ ಮುಖಂಡರ ಬಂಧನ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪುರ್ಬಾ ಬರ್ದಾಮನ್ ಜಿಲ್ಲೆಯಲ್ಲಿ 74 ವರ್ಷದ ವೃದ್ಧರೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಮೂವರು ಸ್ಥಳೀಯ ಬಿಜೆಪಿ ಮುಖಂಡರನ್ನು ಬಂಧಿಸಲಾಗಿದೆ.

ಶುಕ್ರವಾರ ಬಂಧಿಸಲಾಗಿದ್ದ ಮೂವರು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವೊಂದರ ಮುಂದೆ ಹಾಜರು ಪಡಿಸ ಲಾಯಿತು. ಮಾ.9 ರಂದು ರಾನಾ ಪೊಲೀಸ್ ಠಾಣೆ ಪ್ರದೇಶದ ಮನೆಯಲ್ಲಿ ವೃದ್ಧನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ದಿನ ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡಿಕೊಂಡು ವೃದ್ಧ ಬಂದಿದ್ದು, ಅದನ್ನು ದೋಚುವ ಉದ್ದೇಶದಿಂದ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.

ಆಕಸ್ಮಿಕವಾಗಿ ಗುಂಡು ವೃದ್ಧನ ಮೇಲೆ ಹಾರಿತು ಎಂದು ಆರೋಪಿಯೊಬ್ಬ ಹೇಳಿಕೆ ನೀಡಿದ್ದಾನೆ. ಮೊಬೈಲ್ ಫೋನ್ ಲೋಕೇಷನ್ ನಿಂದ ಮೂವರು ಆರೋಪಿಗಳನ್ನುಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.