Saturday, 14th December 2024

ಮೊಹಮ್ಮದ್ ಜುಬೈರ್ ವಿರುದ್ದ ಮೂರು ಹೊಸ ಪ್ರಕರಣ ದಾಖಲು

ನವದೆಹಲಿ: ದೆಹಲಿ ಪೊಲೀಸರು ಶನಿವಾರ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ಮೂರು ಹೊಸ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ಪಿತೂರಿ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲಾಗಿದ್ದು, ಆರೋಪಿ ವಿದೇಶಗಳಿಂದ ದೇಣಿಗೆ ಪಡೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಜುಬೈರ್ ಪರ ವಕೀಲರು ದೆಹಲಿ ಹೈಕೋರ್ಟ್ʼನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಜುಬೈರ್ʼನನ್ನ ದೆಹಲಿ ಪೊಲೀಸರು ತಮ್ಮ ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಬಂಧಿಸಿದ್ದರು. ಬಳಿಕ, ವಿಚಾರಣಾ ನ್ಯಾಯಾ ಲಯವು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿತು.

ಇನ್ನು ಒಂದು ದಿನದ ಕಸ್ಟಡಿ ವಿಚಾರಣೆ ಅವಧಿ ಮುಗಿದ ನಂತರ, ಮುಖ್ಯ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಜುಬೈರ್‌ ಕಸ್ಟಡಿ ಅವಧಿಯನ್ನ ಇನ್ನೂ ನಾಲ್ಕು ದಿನಗಳ ವರೆಗೆ ವಿಸ್ತರಿಸಿದರು.