“ಯುದ್ಧನೌಕೆಯ ಕಂಪಾರ್ಟ್ಮೆಂಟ್ ಒಂದರಲ್ಲಿ ಸ್ಫೋಟ ಸಂಭವಿಸಿದೆ. ಆದರೆ ನೌಕೆಗೆ ದೊಡ್ಡಮಟ್ಟದಲ್ಲಿ ಹಾನಿಯಾಗಿಲ್ಲ” ಎಂದು ಕೇಂದ್ರ ಪ್ರಕಟಣೆ ವಿವರಿಸಿದೆ.
ಯಾವುದೇ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳಿಂದ ಈ ಸ್ಫೋಟ ಸಂಭವಿಸಿಲ್ಲ. ಸ್ಫೋಟಕ್ಕೆ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸ ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಐಎನ್‌ಎಸ್ ರಣವೀರ್‌ನಲ್ಲಿ ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್‌ನಿಂದ ಕರಾವಳಿಯ ಕಾರ್ಯಾಚರಣೆಯ ನಿಯೋಜನೆಯಲ್ಲಿತ್ತು ಮತ್ತು ಶೀಘ್ರ ದಲ್ಲೇ ಬೇಸ್ ಪೋರ್ಟ್‌ಗೆ ಮರಳಬೇಕಿತ್ತು.