ಮಹಾರಾಷ್ಟ್ರ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಹತ್ತಿರದ ತಹಸಿಲ್ ನಲ್ಲಿ ಕಲ್ಲಿದ್ದಲು ತುಂಬಿ ಕೊಂಡಿದ್ದ ಟ್ರಕ್ ಗುಡಿಸಲಿನ ಮೇಲೆ ಪಲ್ಟಿಯಾಗಿ ಮಲಗಿದ್ದ ಮೂವರು ಬಾಲಕಿಯರು ಮೃತಪಟ್ಟಿ ದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಎರಡು ವರ್ಷದ ಬಾಲಕಿ ಬದುಕುಳಿದಿದ್ದಾಳೆ.
ಮೃತಪಟ್ಟ ಬಾಲಕಿಯರ ಪಾಲಕರು, ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದರು. ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಕ್ಕಳನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದರು. ತಂದೆ – ತಾಯಿ ಇಲ್ಲದ ಸಂದರ್ಭದಲ್ಲಿ ಚಿಕ್ಕ ಮಕ್ಕಳು ಗುಡಿಸಲಿನಲ್ಲಿ ಮಲಗಿದ್ದಾಗ ಈ ಅಚಾತುರ್ಯ ನಡೆದಿದೆ.
ಕಲ್ಲಿದ್ದಲನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಗುಡಿಸಲ ಮೇಲೆಯೇ ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಟ್ಟಿಗೆ ಫ್ಯಾಕ್ಟರಿಯ ಮಾಲೀಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಮಾಲೀಕ ಗೋಪಿನಾಥ್ ಮದ್ವಿ, ಕಲ್ಲಿದ್ದಲು ತಂದಿದ್ದ ಸುರೇಶ್ ರಾಮದಾಸ್ ಪಾಟೀಲ್ ಮತ್ತು ಟ್ರಕ್ ಚಾಲಕ ತೌಫಿಕ್ ಶೇಖ್ ಬಂಧಿತರು ಎಂದು ಗುರುತಿಸ ಲಾಗಿದ್ದು, ಬಂಧಿತರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.