Thursday, 12th December 2024

ಟಿಬೆಟ್‌ನ ಆಧ್ಯಾತ್ಮಿಕ ಗುರು 14ನೇ ದಲೈಲಾಮಾ ಸಿಕ್ಕಿಂಗೆ ಆಗಮನ

ಗ್ಯಾಂಗ್ಟಕ್: ಟಿಬೆಟ್‌ನ ಆಧ್ಯಾತ್ಮಿಕ ಗುರು 14ನೇ ದಲೈಲಾಮಾ ಟೆಂಜಿನ್ ಗ್ಯಾಟ್ಸೊ ಅವರು 13 ವರ್ಷಗಳ ನಂತರ ಮೂರು ದಿನಗಳ ಭೇಟಿಗಾಗಿ ಸೋಮವಾರ ಸಿಕ್ಕಿಂಗೆ ಆಗಮಿಸಿದರು.

ಪೂರ್ವ ಸಿಕ್ಕಿಂನ ಲಿಬಿಂಗ್ ಮಿಲಿಟರಿ ಹೆಲಿಪ್ಯಾಡ್‌ನಲ್ಲಿ ದಲೈ ಲಾಮಾ ಅವರನ್ನು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಸಂಪುಟ ಸಚಿವರು ಮತ್ತು ಇತರ ಗಣ್ಯರು ಅವರನ್ನು ಸ್ವಾಗತಿಸಿದರು.

ದಲೈಲಾಮಾರನ್ನು ಹೆಲಿಪ್ಯಾಡ್ ಬಳಿಯ ವಿಸಿ ಗಂಜು ಲಾಮಾ ಗೇಟ್‌ನಿಂದ ರಾ.ಹೆದ್ದಾರಿ 10 ರ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಹೋಟೆಲ್‌ನಲ್ಲಿ ದಲೈಲಾಮಾ ಅವರನ್ನು ಭೇಟಿಯಾಗಲಿದ್ದಾರೆ.

ದಲೈ ಲಾಮಾ ಅವರು ಡಿ.12ರಂದು ರಾಜಧಾನಿ ಗ್ಯಾಂಗ್‌ಟಾಕ್‌ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗ ವಹಿಸಲಿದ್ದು ಡಿ.14ರಂದು ಸಿಕ್ಕಿಂನಿಂದ ಹಿಂತಿರುಗಲಿದ್ದಾರೆ.

ಸಿಕ್ಕಿಂ ಸರ್ಕಾರವು ಅವರ ಆಗಮನಕ್ಕೆ ಸಂಪೂರ್ಣ ಸಿದ್ಧತೆಗಳನ್ನು ಮಾಡಿತ್ತು, ಆದರೆ ಅಕ್ಟೋಬರ್ 3 ಮತ್ತು 4 ರ ರಾತ್ರಿ ತೀಸ್ತಾ ಪ್ರವಾಹದಿಂದಾಗಿ ಅವರ ಕಾರ್ಯಕ್ರಮವನ್ನು ಮುಂದೂಡಲಾಯಿತು. ದಲೈ ಲಾಮಾ ಅವರು 2010 ರಲ್ಲಿ ಸಿಕ್ಕಿಂಗೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು.