Thursday, 12th December 2024

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ಕಡಲ ಗಡಿಯಲ್ಲಿ ಕಣ್ಗಾವಲು ತೀವ್ರ

ಚೆನ್ನೈ: ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಬರುವ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದ್ದು, 3 ವರ್ಷದ ಮಗು ಸೇರಿ ಒಂದೇ ಕುಟುಂಬದ ನಾಲ್ವರು ದೇಶಕ್ಕೆ ಆಗಮಿಸಿದ್ದಾರೆ.

ಕಿಶಾಂತನ್ ಮತ್ತು ಅವರ ಪತ್ನಿ ರಂಜಿತಾ, ತಮ್ಮ ಮಕ್ಕಳಾದ 10 ವರ್ಷದ ಬಾಲಕಿ ಮತ್ತು 2 ವರ್ಷದ ಬಾಲಕನೊಂದಿಗೆ ಇಂದು ಬೆಳಗಿನ ಜಾವ ತಮಿಳು ನಾಡಿಗೆ ಆಗಮಿಸಿ ದನುಷ್ಕೋಡಿಯ ಅರಿಚಲ್ಮುನೈ ಬೀಚ್‍ಗೆ ಬಂದಿಳಿದಿದ್ದಾರೆ.

ಕುಟುಂಬವನ್ನು ಮಂಡಪಂ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಅವರನ್ನು ಮಂಡಪಂ ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ತೀವ್ರ ಏರಿಕೆ ಮತ್ತು ಅಗತ್ಯ ವಸ್ತುಗಳ ಕೊರತೆಯಿಂದಾಗಿ ಶ್ರೀಲಂಕಾ ತಮಿಳರು ನಿರಾಶ್ರಿತರಾಗಿ ಭಾರತಕ್ಕೆ ಬರುವ ಸಾಧ್ಯತೆಯಿರುವುದರಿಂದ, ಅಂತಾರಾಷ್ಟ್ರೀಯ ಕಡಲ ಗಡಿಯಲ್ಲಿ ಕಣ್ಗಾವಲು ತೀವ್ರಗೊಳಿಸು ವಂತೆ ಭಾರತೀಯ ಕರಾವಳಿ ಕಾವಲು ಪಡೆ ಅಧಿಕಾರಿಗಳಿಗೆ ಸೂಚಿಸಿದೆ.