Thursday, 12th December 2024

ಮೊಂಡಲ್ ಗೆ ಹೀರೋ ರೀತಿ ಗೌರವಿಸಲು ಬಯಸಿದರೆ, ಜೈಲಿಗೆ ಹೋಗಬೇಕಾಗುತ್ತದೆ

ಕೋಲ್ಕತಾ: ಪಾರ್ಥ ಚಟರ್ಜಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಜನರು ಅವರನ್ನು ಅದ್ದೂರಿಯಾಗಿ ಸ್ವಾಗತಿಸಬೇಕೆಂಬ ಹೇಳಿಕೆಗೆ ಬಿಜೆಪಿಯ ಸುವೇಂದು ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ವೇಳೆ ಮಮತಾ ಬ್ಯಾನರ್ಜಿ ಚಟರ್ಜಿಯನ್ನು ಗೌರವಿಸಲು ಬಯಸಿದರೆ ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಿರ್ಬ್ಯೂಮ್ ಜಿಲ್ಲೆಯ ಮಂಗಲ್ ಕೋಟ್ ನಲ್ಲಿ 2010ರಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಕೋರ್ಟ್ ಅನುಬ್ರತಾ ಮೊಂಡಲ್ ಮತ್ತು ಇತರ 13 ಮಂದಿಯನ್ನು ಶುಕ್ರವಾರ ಖುಲಾಸೆಗೊಳಿಸಿ ಆದೇಶ ನೀಡಿತ್ತು.

ಅನುಬ್ರತಾ ಮೊಂಡಲ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ, ಈ ಸಂದರ್ಭದಲ್ಲಿ ನೀವು (ಜನರು) ಅವರನ್ನು ಹೀರೋ ರೀತಿಯಲ್ಲಿ ಸ್ವಾಗತಿಸಬೇಕು ಎಂದು ಮಮತಾ ಮಾತನಾ ಡುತ್ತ ತಿಳಿಸಿದ್ದರು.

ಈ ಬಗ್ಗೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡ, ಬಂಗಾಳದ ವಿಪಕ್ಷ ನಾಯಕ ಸುವೇಂದು ಅಧಿಕಾರಿ, ಒಂದು ವೇಳೆ ಮುಖ್ಯಮಂತ್ರಿ ಬ್ಯಾನರ್ಜಿ ಅವರು ಅನುಬ್ರತಾ ಮೊಂಡಲ್ ಗೆ ಹೀರೋ ರೀತಿ ಗೌರವಿಸಲು ಬಯಸಿದರೆ, ನಂತರ ಆಕೆ ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.