Friday, 15th November 2024

Time boxing: ನಿತ್ಯದ ಸಮಯ ನಿರ್ವಹಣೆಗಾಗಿ ಅನುಸರಿಸಿ ಟೈಮ್‌ ಬಾಕ್ಸಿಂಗ್ ಟೆಕ್ನಿಕ್!

Time Boxing

ಯಾವುದೇ ಕೆಲಸವಾಗಿರಲಿ ಸಮಯಕ್ಕೆ ಸರಿಯಾಗಿ ಮುಗಿಸಿದರೆ ಜೀವನ ಸುಗಮವಾಗಿ ಸಾಗುತ್ತದೆ. ಒಂದು ಚೂರು ಹೆಚ್ಚು ಕಡಿಮೆಯಾದರೂ ಸಂಪೂರ್ಣ ದಿನಚರಿಯ (work and life balance) ಮೇಲೆ ಪರಿಣಾಮ ಬೀರುತ್ತದೆ. ಎಲ್ಲವೂ ಅಲ್ಲೋಲ ಕಲ್ಲೋಲವಾದಂತಹ ಅನುಭವ ಉಂಟು ಮಾಡುತ್ತದೆ. ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಬೇಕಿದ್ದರೆ ಟೈಮ್ ಬಾಕ್ಸಿಂಗ್ (Time boxing) ವಿಧಾನವನ್ನು ಅನುಸರಿಸಬಹುದು.

ಶೇಖಿನಾ ಬಾಸ್ ಎಂಬವರು 22 ವರ್ಷದವರಾಗಿದ್ದಾಗ ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಈಗ ಅವರ ವಯಸ್ಸು 39. ಪ್ರಸ್ತುತ ಅವರು ಸಂಸ್ಥೆಯ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದಾರೆ.

ವಿಶ್ವದ ಎರಡನೇ ಅತೀ ದೊಡ್ಡ ಮತ್ತು ಅಮೆರಿಕನ್ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಕಂಪನಿಯಾಗಿರುವ ಗೋಲ್ಡ್‌ಮನ್ ಸ್ಯಾಚ್ಸ್ 2024ರ ಫೋರ್ಬ್ಸ್ ಗ್ಲೋಬಲ್ 2000ರಲ್ಲಿ 23 ನೇ ಸ್ಥಾನದಲ್ಲಿದೆ.
ಅತ್ಯಂತ ಶಕ್ತಿಶಾಲಿ ಸಂಸ್ಥೆಗಳಲ್ಲಿ ಒಂದಾದ ಗೋಲ್ಡ್‌ಮನ್ ಸ್ಯಾಚ್ಸ್ ನ ಮುಕ್ಯಸ್ಥರಾಗಿದ್ದುಕೊಂಡು ಐದು ಮಕ್ಕಳ ತಾಯಿಯಾಗಿರುವ ಶೇಖಿನಾ ಬಾಸ್ ಅವರಿಗೆ ಸಮಯ ನಿರ್ವಹಣೆಯು ಅತ್ಯಂತ ಮಹತ್ವದ್ದಾಗಿದೆ.

ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಹೆಚ್ಚು ಕಾಲ ಕೆಲಸ ಮಾಡಿರುವ ಬಾಸ್ ತಮ್ಮ ಅನುಭವದ ಬಗ್ಗೆ ಹೇಳುವುದು ಹೀಗೆ..
ನಿತ್ಯದ ಕೆಲಸಗಳಲ್ಲಿ ನೀವು ನಿಮ್ಮ ಗುರಿಯನ್ನು ಹೇಗೆ ಹೊಂದಿಸುತ್ತೀರಿ ಎಂಬುದರ ಮೇಲೆ ಕೆಲಸ- ಜೀವನದ ಸಮತೋಲನ ನಿಂತಿದೆ. ಇದನ್ನು ನಾನು ಮೊದಲೇ ಅರಿತುಕೊಂಡೆ. ನಮ್ಮನ್ನು ನಾವು ರೀಚಾರ್ಜ್ ಮಾಡಲು ಮತ್ತು ಹೆಚ್ಚು ಸಂತೋಷ ಕೊಡುವ ಕೆಲಸಗಳನ್ನು ಮಾಡಲು ಸಮಯವನ್ನು ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಸಮಯ ನಿರ್ವಹಣೆಗಾಗಿ ಟೈಮ್‌ಬಾಕ್ಸಿಂಗ್ ತಂತ್ರದ ಬಗ್ಗೆ ಹೇಳಿರುವ ಬಾಸ್, ಇದು ಕೆಲಸ ಮತ್ತು ಜೀವನದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.

Time Boxing

ಟೈಮ್ ಬಾಕ್ಸಿಂಗ್ ಎಂದರೇನು?

ಮಾಡಬೇಕಿರುವ ಪ್ರತಿಯೊಂಡು ಕಾರ್ಯಕ್ಕೂ ನಿರ್ದಿಷ್ಟ ಸಮಯವನ್ನು ಮೀಸಲಿಡುವುದು ಟೈಮ್ ಬಾಕ್ಸಿಂಗ್ ಒಂದು ವಿಧಾನವಾಗಿದೆ. ಈ ತಂತ್ರ ಅತ್ಯಂತ ಸರಳವಾಗಿದೆ. ಇದರಲ್ಲಿ ಪ್ರತಿಯೊಂದು ಕಾರ್ಯವಿಧಾನವನ್ನು ವಿವರಿಸಲಾಗುತ್ತದೆ. ಇದರಲ್ಲಿ ಮಾಡಬೇಕಾದ ಪಟ್ಟಿಯಲ್ಲಿರುವ ಪ್ರತಿಯೊಂದು ಕಾರ್ಯಕ್ಕೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗುತ್ತದೆ.

ಮೊದಲೇ ಪ್ರತಿಯೊಂದು ಕಾರ್ಯಕ್ಕೂ ಸಮಯವನ್ನು ನಿಗದಿಪಡಿಸಿದರೆ ಅದರಂತೆ ಮುಂದುವರಿದರೆ ಕೆಲಸ ಮಾಡುವಾಗ ಯಾವುದೇ ಗೊಂದಲ ಉಂಟಾಗುವುದಿಲ್ಲ. ನಿಗದಿಪಡಿಸಿದ ಸಮಯದೊಳಗೆ ನಿರ್ಧರಿಸಿರುವ ಕೆಲಸ ಮಾಡಿ. ಬಳಿಕ ಮಾಡಲೇಬೇಕಾದ ಇನ್ನೊಂದು ಕೆಲಸಕ್ಕೆ ತೆರಳಿ ಎನ್ನುತ್ತಾರೆ ಬಾಸ್.

ಟೈಮ್ ಬಾಕ್ಸಿಂಗ್ ನಲ್ಲಿ ವಿರಾಮಕ್ಕೂ ವಿವಿಧ ಸಮಯವಿದೆ. ಇಮೇಲ್‌ಗಳಿಗೆ ಉತ್ತರಿಸಲು, ಬೇಡಿಕೆಯ ಯೋಜನೆಯನ್ನು ನಿಭಾಯಿಸಲು ಅಥವಾ ಸಭೆಗಳಿಗೆ ತಯಾರಿ ಮಾಡಲು ಸಾಮಾನ್ಯವಾಗಿ 8 ರಿಂದ 10 ಗಂಟೆಯ ನಡುವೆ 1- 2 ಗಂಟೆಗಳನ್ನು ಮೀಸಲಿಡುವ ಬಾಸ್, ತಮ್ಮ ಮನಸ್ಸು ಫ್ರೆಶ್ ಆಗಲು ಪ್ರಯಾಣದ ಸಮಯವನ್ನು ಮೀಸಲಿಡುವುದಾಗಿ ಹೇಳಿದ್ದಾರೆ.

Viral News: ರಾತ್ರಿ ಓವರ್ ಟೈಮ್ ಮಾಡಿ ಮರುದಿನ ಕಚೇರಿಗೆ ತಡವಾಗಿ ಬರುತ್ತೇನೆ ಎಂದ ಉದ್ಯೋಗಿ-ಭಾರೀ ವೈರಲಾಗ್ತಿದೆ ಆತ ಮಾಡಿದ ಮೆಸೇಜ್‌!

ಟೈಮ್ ಬಾಕ್ಸಿಂಗ್ ಎನ್ನುವುದು ನಿಗದಿತ ಸಮಯಕ್ಕೆ ನಿಗದಿತ ಕೆಲಸ ಮುಗಿಸಲು ಮಾಡುವ ಯೋಜನೆಯಾಗಿದೆ. ಇದರಿಂದ ಸಮಯ ವ್ಯರ್ಥವಾಗುವುದನ್ನು ತಡೆಯಬಹುದು. ಅಲ್ಲದೇ ಪ್ರತಿಯೊಂದು ಕೆಲಸವನ್ನು ಹೆಚ್ಚು ಜಾಗರೂಕತೆಯಿಂದ ಮಾಡಲು ಇದು ಸಹಾಯ ಮಾಡುತ್ತದೆ.