ತಿರುಮಲ: ಅಲಿಪಿರಿ ವಾಕ್ವೇನಲ್ಲಿ ಆರನೇ ಚಿರತೆಯನ್ನು ಅರಣ್ಯ ಇಲಾಖೆ ಬುಧವಾರ ಸೆರೆ ಹಿಡಿದಿದೆ.
ಅಲಿಪಿರಿ ಫುಟ್ಪಾತ್ನಲ್ಲಿ ಆಪರೇಷನ್ ಚಿರುತ ಮುಂದುವರಿದಿದ್ದು, ಚಿರತೆಯನ್ನು ಎಸ್ವಿ ಮೃಗಾಲಯ ಪಾರ್ಕ್ಗೆ ಸ್ಥಳಾಂತರಿಸಲು ಅರಣ್ಯಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ ಚಿರತೆ ಸೆರೆ ಸಿಕ್ಕ ಸ್ಥಳಕ್ಕೆ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಭೇಟಿ ನೀಡಿದ್ದರು. ಆಗಸ್ಟ್ 12 ರಂದು ಆರು ವರ್ಷದ ಬಾಲಕಿ ಲಕ್ಷಿತಾ ಮೇಲೆ ಚಿರತೆ ದಾಳಿ ನಡೆಸಿ ಕೊಂದಿತ್ತು.
ಸುಮಾರು 4-5 ವರ್ಷ ವಯಸ್ಸಿನ ಮೊದಲ ಚಿರತೆ ಆಗಸ್ಟ್ 14 ರಂದು ಸಿಕ್ಕಿಬಿದ್ದಿದೆ. ಮೂರು ದಿನಗಳ ನಂತರ, ಆಗಸ್ಟ್ 17 ರಂದು, ಸುಮಾರು ಐದು ವರ್ಷಗಳ ಗಂಡು ಚಿರತೆಯನ್ನು ಸೆರೆಹಿಡಿಯಲಾಯಿತು.
ಮೂರನೇ ಚಿರತೆಯನ್ನು ಆಗಸ್ಟ್ 28 ರಂದು ಏಳನೇ ಮೈಲಿ ಬಳಿ ಮತ್ತು ನಾಲ್ಕನೇ ಚಿರತೆಯನ್ನು ಸೆಪ್ಟೆಂಬರ್ 7 ರಂದು ಅಲಿಪಿರಿ ಪಾದಚಾರಿ ಮಾರ್ಗದ ಸಮೀಪವಿರುವ ಆನೆ ಕಮಾನು ಬಳಿ ಸೆರೆಹಿಡಿಯಲಾಯಿತು.