ಟೋಕನ್ ರಹಿತ ದರ್ಶನ ಮತ್ತು ವಸತಿ ಹಂಚಿಕೆ ವ್ಯವಸ್ಥೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು, ಭೇಟಿ ನೀಡುವ ಬಹುಸಂಖ್ಯೆಯ ಯಾತ್ರಾರ್ಥಿ ಗಳಿಗೆ ಹೆಚ್ಚು ಪರಿಣಾಮಕಾರಿ ಸೇವೆಗಳನ್ನು ಒದಗಿಸುವುದು FRT ಯ ಗುರಿಯಾಗಿದೆ.
ಸರ್ವ ದರ್ಶನ ಸಂಕೀರ್ಣದಲ್ಲಿ ಮತ್ತು ಎಚ್ಚರಿಕೆಯ ಠೇವಣಿ ಮರುಪಾವತಿ ಕೌಂಟರ್‌ಗಳಲ್ಲಿ ವ್ಯಕ್ತಿಯು ಹೆಚ್ಚಿನ ಟೋಕನ್‌ಗಳನ್ನು ಪಡೆಯುವುದನ್ನು ತಡೆಯಲು ಈ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಇದಕ್ಕೂ ಮುನ್ನ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ದೇವಸ್ಥಾನದ ಡ್ರೋನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತನಿಖೆಗೆ ಆದೇಶಿಸಿದ್ದರು. ಐಎಎನ್‌ಎಸ್ ವರದಿಯ ಪ್ರಕಾರ, ತಿರುಮಲದ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ವ್ಯವಹಾರ ಗಳನ್ನು ನಿರ್ವಹಿಸುವ ಟಿಟಿಡಿ, ಹೈದರಾ ಬಾದ್‌ನ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ ವೀಡಿಯೊವನ್ನು ಗಮನಿಸಿದ್ದಾರೆ.
ಬೆಟ್ಟದ ದೇವಾಲಯದ ಮೇಲೆ ವಿಮಾನ ಅಥವಾ ಡ್ರೋನ್‌ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ.