Thursday, 21st November 2024

Tirupati Laddu Row: ಜಗನ್‌ ಮೋಹನ್‌ ರೆಡ್ಡಿ ತಿರುಪತಿ ಭೇಟಿ ರದ್ದು?

Tirupati laddu raw

ಹೈದರಾಬಾದ್‌: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ(Jagan Mohan Reddy) ನಾಳಿನ ತಿರುಪತಿ ತಿರುಮಲ ದೇಗುಲ ಭೇಟಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddu Row) ವಿವಾದದ ನಡುವೆ ಜಗನ್‌ ನಾಳೆ ತಿರುಪತಿ ದೇಗುಲಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದರು. ಆದರೆ ದೇಗುಲಕ್ಕೆ ಭೇಟಿ ನೀಡುವ ಮುನ್ನ ಜಗನ್‌ಗೆ ಪಾಪ ಪ್ರಾಯಶ್ಚಿತ ಕಾರ್ಯ ಕೈಗೊಳ್ಳಬೇಕೆಂದು ಟಿಡಿಪಿ ಪಟ್ಟು ಹಿಡಿದಿದ್ದು, ಹೀಗಾಗಿ ಈ ಎಲ್ಲಾ ಗೊಂದಲದ ನಡುವೆ ದೇಗುಲಕ್ಕೆ ಭೇಟಿ ನೀಡುವ ಯೋಜನೆಯನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ತಿರುಮಲ ಲಡ್ಡು, ವೆಂಕಟೇಶ್ವರ ಸ್ವಾಮಿಯ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಚಂದ್ರಬಾಬು ನಾಯ್ಡು ರಾಜಕೀಯ ದುರುದ್ದೇಶದಿಂದ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಿದ್ದಾರೆಂದು ಸುಳ್ಳು ಹೇಳಿದ್ದಾರೆ. ಚಂದ್ರಬಾಬು ನಾಯ್ಡು ಮಾಡಿದ ಈ ಪಾಪವನ್ನು ತೊಡೆದುಹಾಕಲು ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜೆಗಳಲ್ಲಿ ಭಾಗವಹಿಸಲು YSRCP ಕರೆ ನೀಡುತ್ತಿದೆ. ಅಲ್ಲದೇ ಶನಿವಾರ ತಿರುಪತಿ ದೇಗುಲಕ್ಕೆ ಭೇಟಿ ನೀಡುವುದಾಗಿ ಜಗನ್‌ ಘೋಷಿಸಿದ್ದರು. ಆದರೆ ದೇಗುಲಕ್ಕೆ ಭೇಟಿ ಕೊಡುವ ಮುನ್ನ ಪಾಪ ಪರಿಹಾರ ಮಾಡಿಕೊ‍ಳ್ಳಬೇಕು ಎಂದು ತೆಲುಗು ದೇಶಂ ಪಕ್ಷ(TDP) ಪಟ್ಟು ಹಿಡಿದಿದೆ. ಅಲ್ಲದೇ ಕ್ರೈಸ್ತ ಧರ್ಮದವರಾದ ಜಗನ್‌ ಮೋಹನ್‌ ರೆಡ್ಡಿ ಅವರಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇದೆ ಎಂಬ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ರೆಡ್ಡಿ ತಿರುಪತಿ ಭೇಟಿ ಬಗ್ಗೆ ಟಿಡಿಪಿ ವಕ್ತಾರ ಕೊಮ್ಮಾರೆಡ್ಡಿ ಪಟ್ಟಾಭಿ ಪ್ರತಿಕ್ರಿಯಿಸಿದ್ದು, ಭಗವಂತ ಬಾಲಾಜಿ ಮೇಲೆ ತಮಗೆ ಅಪಾರ ಬಕ್ತಿ ಇರುವುದಾಗಿ ಘೋಷನಾ ಪತ್ರಕ್ಕೆ ಸಹಿ ಮಾಡದ ಹೊರತು ದೇಗುಲಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಜಗನ್‌ ತಿಳಿಸಿದ್ದಾರೆ. ನೀವು ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆಯುಳ್ಳವರು ಎಂದು ನಮಗೆಲ್ಲರಿಗೂ ತಿಳಿದಿದೆ, ಅದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂ ಧರ್ಮಕ್ಕೆ ಸೇರಿದವರು, ಅವರು ಭಗವಾನ್ ಬಾಲಾಜಿಯ ದರ್ಶನವನ್ನು ಹೊಂದಲು ಬಯಸಿದರೆ, ಅವರು ಬಾಲಾಜಿಯ ಮೇಲೆ ನಂಬಿಕೆಯನ್ನು ಹೊಂದಿದ್ದಾರೆ ಎಂಬ ಘೋಷಣೆಗೆ ಸಹಿ ಹಾಕಬೇಕು ಎಂದು ರಾಮ್ ಹೇಳಿದರು.

“ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ, ಆದರೆ ಅದೊಂದು ಆಚರಣೆ, ಅದೊಂದು ಪದ್ಧತಿ. ಹಾಗಾಗಿ ಜಗನ್ ಮೋಹನ್ ರೆಡ್ಡಿ, ನೀವು ಘೋಷಣೆಗೆ ಸಹಿ ಹಾಕಬೇಕು, ಇಲ್ಲದಿದ್ದರೆ ದೇವಸ್ಥಾನದ ಸಂಕೀರ್ಣದ ಒಳಗೆ ಹೋಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.

ಏನಿದು ವಿವಾದ?
ಕೋಟ್ಯಂತರ ಭಕ್ತರು ಭೇಟಿ ನೀಡುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು (Beef Fat) ಮತ್ತು ಮೀನಿನ ಎಣ್ಣೆ (Fish Fat) ಬೆರೆಸಲಾಗಿದೆ ಎಂಬ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದ ತನಿಖೆಯನ್ನು ಆಂಧ್ರ ಸರ್ಕಾರ ಎಸ್‌ಐಟಿಗೆ ಒಪ್ಪಿಸಿದೆ.

ವೈಎಸ್‌ಆರ್‌ಪಿ ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದಿದೆ ಎಂದು ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಿಂದ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಮಾಂಸ ಟಾಲೋ ಮತ್ತು ಹಂದಿಮಾಂಸದ ಕುರುಹುಗಳಿವೆ ಎಂದು ವರದಿ ಸೂಚಿಸಿದೆ.

ಈ ಸುದ್ದಿಯನ್ನೂ ಓದಿ: Tirupati Laddu Row: ಲಡ್ಡು ವಿವಾದದ ನಡುವೆಯೇ ತಿರುಪತಿ ಭೇಟಿಗೆ ಜಗನ್‌ ಸಜ್ಜು- ಷರತ್ತು ವಿಧಿಸಿದ ಟಿಡಿಪಿ