Thursday, 21st November 2024

Tirupati Temple: ತಿರುಮಲದಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದೂಗಳಾಗಿರಬೇಕು.. ಇತರರಿಗೆ ವಿಆರ್‌ಎಸ್‌: TTDಯ ನೂತನ ಅಧ್ಯಕ್ಷ ಘೋಷಣೆ

Tirupati Temple

ಹೈದರಾಬಾದ್:‌ ತಿರುಪತಿ ದೇವಸ್ಥಾನಂ (Tirupati Temple) ಮಂಡಳಿಯ ನೂತನವಾಗಿ ನೇಮಕಗೊಂಡ ಅಧ್ಯಕ್ಷ ಬಿ. ಆರ್ ನಾಯ್ಡು(BR Naidu) ಅವರು ಗುರುವಾರ ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲದಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದೂಗಳಾಗಿರಬೇಕು ಎಂದು ಹೇಳಿದ್ದಾರೆ. ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳಾಗಿರಬೇಕು. ಅದು ನನ್ನ ಮೊದಲ ಪ್ರಯತ್ನವಾಗಿರುತ್ತದೆ. ಇತರೆ ಧರ್ಮದ ಸಿಬ್ಬಂದಿಯನ್ನು ಹೇಗೆ ನಿಭಾಯಿಸಬೇಕು, ಅವರನ್ನು ಬೇರೆ ಸರ್ಕಾರಿ ಇಲಾಖೆಗಳಿಗೆ ಕಳುಹಿಸಬೇಕೇ ಅಥವಾ ವಿಆರ್‌ಎಸ್ (ಸ್ವಯಂ ನಿವೃತ್ತಿ ಯೋಜನೆ) ನೀಡಬೇಕೇ ಎಂಬ ಕುರಿತು ಆಂಧ್ರಪ್ರದೇಶ ಸರ್ಕಾರದೊಂದಿಗೆ (Andhra Pradesh Government) ಮಾತನಾಡುವುದಾಗಿ ಹೇಳಿದರು.

ವೆಂಕಟೇಶ್ವರ ದೇವರ ಭಕ್ತರಾದ ನಾಯ್ಡು ಟಿಟಿಡಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿರುವುದು ಒಂದು ವಿಶೇಷತೆ ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ. ಈ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ರಾಜ್ಯದ ಎನ್‌ಡಿಎ ಸರ್ಕಾರದ ಇತರ ನಾಯಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹಿಂದಿನ ವೈ.ಎಸ್. ಆರ್‌ ಕಾಂಗ್ರೆಸ್‌ ಅವಧಿಯಲ್ಲಿ ತಿರುಮಲದಲ್ಲಿ ಹಲವು ಅವ್ಯವಹಾರ ನಡೆದಿದೆ ಎಂದು ಎಂದು ಆರೋಪಿಸಿರುವ ಬಿ.ಆರ್.ನಾಯ್ಡು, ದೇವಸ್ಥಾನದ ಪಾವಿತ್ರ್ಯತೆ ಕಾಪಾಡಬೇಕು. ನಾನು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೆಲಸ ಮಾಡುವುದಾಗಿ ಹೇಳಿದರು. ವಿಶ್ವ ವಿಖ್ಯಾತ ತಿರುಮಲ ತಿರುಪತಿ ದೇಗುಲವನ್ನು ನಡೆಸಿಕೊಂಡು ಹೋಗುತ್ತಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ಗೆ ಆಂಧ್ರ ಪ್ರದೇಶ ಸರ್ಕಾರ 24 ಸದಸ್ಯರ ಹೊಸ ಮಂಡಳಿಯನ್ನು ಈಗಾಗಲೇ ರಚಿಸಿದೆ.

ಇದನ್ನೂ ಓದಿ: Tirupati train: ಭಕ್ತಾದಿಗಳಿಗೆ ಸಿಹಿ ಸುದ್ದಿ, ಕರಾವಳಿಯಿಂದ ತಿರುಪತಿಗೆ ರೈಲು ಸೇವೆ ವಿಸ್ತರಣೆ

ತಿರುಪತಿ ಲಡ್ಡು ವಿವಾದ :

ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ಜನಪ್ರಿಯ ತಿರುಪತಿ ಲಡ್ಡುಗಳಲ್ಲಿ ಕಳಪೆ ಗುಣಮಟ್ಟದ ಪದಾರ್ಥಗಳು ಹಾಗೂ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಲ್ಯಾಬ್‌ನ ಪರೀಕ್ಷಾ ವರದಿಯಲ್ಲಿ ಆರೋಪ ಸತ್ಯ ಎಂಬುದು ಬಯಲಾಗಿತ್ತು. ಗುಜರಾತ್‌ನ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯಲ್ಲಿರುವ ಜಾನುವಾರು ಮತ್ತು ಆಹಾರ ವಿಶ್ಲೇಷಣೆ ಹಾಗೂ ಕಲಿಕೆ ಕೇಂದ್ರ (ಸಿಎಎಲ್‌ಎಫ್) ಆಂಧ್ರ ಪ್ರದೇಶ ಸರ್ಕಾರಕ್ಕೆ ಈ ವರದಿ ಸಲ್ಲಿಸಿತ್ತು. ವೈಎಸ್‌ಆರ್‌ಸಿಪಿ ಅಧಿಕಾರದಲ್ಲಿ ಇದ್ದಾಗ ತಿರುಪತಿ ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರುವುದನ್ನು ವರದಿ ತಿಳಿಸಿತ್ತು. ಅಲ್ಲದೆ, ಈ ತುಪ್ಪದಲ್ಲಿ ಮೀನಿನ ತೈಲ, ಗೋಮಾಂಸದ ಮತ್ತು ಹಂದಿಯ ಕೊಬ್ಬು ಬೆರಕೆ ಆಗಿತ್ತು ಎಂಬುದು ವರದಿಯಲ್ಲಿ ಬಯಲಾಗಿತ್ತು. ಇದಾದ ನಂತರ ನಾಯ್ಡು ಸರ್ಕಾರ ದೇವಾಲಯವನ್ನು ಶುದ್ಧೀಕರಿಸುವ ಕೆಲಸವನ್ನು ಮಾಡಿತ್ತು.